ಸುಂಟಿಕೊಪ್ಪ, ಡಿ. 19: ಜ್ಞಾನಧಾರಾ ಶಿಶುವಿಹಾರದಲ್ಲಿ ಪುಟಾಣಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮಕ್ಕಳು ವಿವಿಧ ಬಗೆಯ ಉಡುಪುಗಳನ್ನು ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಪೋಷಕರ, ಸಾರ್ವಜನಿಕರ ಚಪ್ಪಾಳೆಗೆ ಪಾತ್ರರಾದರು. ಪೊಲೀಸ್, ಸೈನಿಕ, ಹನುಮಾನ್, ಸಿಂಡ್ರೆಲಾ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಗುಜರಾತಿ ಶೈಲಿ, ಪೆನ್ಸಿಲ್, ಜೋಕರ್ ಇನ್ನಿತ್ಯಾದಿ ವೇಷಗಳನ್ನು ಧರಿಸಿ ನೆರೆದಿದ್ದವರನ್ನು ಮನರಂಜಿಸಿದರು.

ಸ್ಪರ್ಧಾ ವಿಜೇತರು: ನರ್ಸರಿ ವಿಭಾಗ; ಚಾರ್ವಿ (ಪ್ರಥಮ), ಶಿಖಾ (ದ್ವಿತೀಯ), ದ್ಯಾನ (ತೃತೀಯ). ಎಲ್.ಕೆ.ಜಿ. ವಿಭಾಗ: ಭುವಿತ್ ಎಸ್. (ಪ್ರಥಮ), ಸ್ಮಿತಾ, ಪ್ರತಿಕ್ಷಾ (ದ್ವಿತೀಯ), ರಿಹಾಬ್, ಜೈನ್ ಅಹ್ಮದ್ (ತೃತೀಯ). ಯು.ಕೆ.ಜಿ. ವಿಭಾಗ; ಯಶ್ವಿತ್ (ಪ್ರಥಮ), ಇಂಪನ (ದ್ವಿತೀಯ), ಇಬಾ ಫಾತೀಮಾ, ಚಾರಿತ್ರ್ಯ (ತೃತೀಯ) ಸ್ಥಾನ ಪಡೆದುಕೊಂಡರು.

ಈ ಸಂದರ್ಭ ಸಂಸ್ಥೆಯ ಲೀಲಾ ಮೇದಪ್ಪ, ಶೀಲಾ ಅಶೋಕ್, ಮುಖ್ಯ ಶಿಕ್ಷಕಿ ಶಾಂತಿ, ಶಿಕ್ಷಕಿಯರು, ಪೋಷಕರು ಇದ್ದರು.