ನಾಪೆÇೀಕ್ಲು, ಡಿ. 19: ಗ್ರಾಮೀಣ ಕ್ರೀಡಾಕೂಟಗಳು ಪರಸ್ಪರ ಸಾಮರಸ್ಯ ವೃದ್ಧಿಗೆ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು.

ಕಕ್ಕಬೆ ಸಮೀಪದ ಅಮ್ಮಂಗೇರಿ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ 33ನೇ ವರ್ಷದ ಹುತ್ತರಿ ಹಬ್ಬದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ ಇನ್ನೂ ಜೀವಂತವಾಗಿದೆ ಎಂಬದಕ್ಕೆ ಕಳೆದ 33 ವರ್ಷಗಳಿಂದ ಇಲ್ಲಿ ಕ್ರೀಡಾಕೂಟಗಳು ನಡೆಯುತ್ತಿರುವದೇ ಸಾಕ್ಷಿ. ಗ್ರಾಮೀಣ ಜನರ ಸೋತ ದೇಹಕ್ಕೆ, ನೊಂದ ಮನಸ್ಸುಗಳಿಗೆ ಉಲ್ಲಾಸ ಉಂಟುಮಾಡಲು ಕ್ರೀಡೆ ಸಹಕಾರಿಯಾಗಲಿದೆ ಎಂದ ಅವರು ಕ್ರೀಡೆಯಿಂದ ಶಾರೀರಿಕ ಮತ್ತು ಮಾನಸಿಕ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮಾಜಿ ಸೈನಿಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಬಾಲಕ-ಬಾಲಕಿಯರಿಗೆ, 1 ರಿಂದ 10 ವರ್ಷದ ಬಾಲಕ-ಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಓಟ, ಭಾರದ ಗುಂಡು ಎಸೆತ, ಥ್ರೋಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಚೆಂಡು ಬದಲಾಯಿಸುವದು, ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪೆÇಂಗೇರ ಉಲ್ಲಾಸ್ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಬೊಳ್ಳನ್ನಮ್ಮಂಡ ಪೆÇನ್ನಪ್ಪ, ಕಣಿಯರ ನಾಣಯ್ಯ, ರಾಜೇಶ್, ಮತ್ತಿತರರಿದ್ದರು.