ಮಡಿಕೇರಿ, ಡಿ. 19: ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ ಕೊಡಗು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ತಾ. 21 ರಂದು ರಾಜಾಸೀಟ್ ಉದ್ಯಾನವನ ಆವರಣದಲ್ಲಿ ‘ಅಭಿರಂಗ’ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಡಿ ಬೆಳಿಗ್ಗೆ 11ಗಂಟೆಗೆ ಬೀದಿ ನಾಟPವನ್ನು ಬಾಲಕರ ಬಾಲಮಂದಿರ ಮಡಿಕೇರಿ, ಬಾಲಕಿಯರ ಬಾಲಮಂದಿರ ಮಡಿಕೇರಿ, ಶಿಶು ಕಲ್ಯಾಣ ಸಂಸ್ಥೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ, ಜೂನಿಯರ್ ಕಾಲೇಜು ಮಕ್ಕಳಿಂದ ‘ನೀಲಿ ರಿಬ್ಬನ್’, ‘ಪ್ಲಾಸ್ಟಿಕ್ ಭೂತ’, ‘ನೀರೋ ನೀರು’ ಎಂಬ ಬೀದಿನಾಟಕ ಮತ್ತು ಅಪರಾಹ್ನ 3.30 ಗಂಟೆಗೆ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ‘ಹಕ್ಕಿ ಹಾಡು’ ಹಾಗೂ ‘ಕೆಂಪು ಹೂ’ ಎಂಬ ರಂಗಪ್ರದರ್ಶನವನ್ನು ಆಯೋಜಿಸಲಾಗಿದೆ.