ಗೋಣಿಕೊಪ್ಪ ವರದಿ, ಡಿ. 19: ಮಹಾಮಾತೆ ಶ್ರೀ ಶಾರದಾದೇವಿ ಅವರ 167 ನೇ ಜನ್ಮದಿನೋತ್ಸವವನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಬುಧವಾರ ಆಚರಿಸಲಾಯಿತು. ವಿವಿಧ ಪೂಜಾ ಕಾರ್ಯ, ಭಜನೆ, ಪ್ರವಚನ ನಡೆಯಿತು. ಮುಂಜಾನೆ ಮಂಗಳಾರತಿ, ಉಷಾಕೀರ್ತನೆ, ವಿಶೇಷ ಪೂಜೆ ನೆರವೇರಿತು. ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಹೋಮ ನಡೆಯಿತು. ಶ್ರೀ ಶಾರದಾದೇವಿ ಬಗ್ಗೆ ವಚನವೇದ ಕಾರ್ಯಕ್ರಮವನ್ನು ಹಿರಿಯ ಸ್ವಾಮೀಜಿಗಳು ನಡೆಸಿಕೊಟ್ಟರು. ಪರಹಿತನಂದಾ ಸ್ವಾಮೀಜಿ ಹಾಗೂ ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು.