ವೀರಾಜಪೇಟೆ, ಡಿ. 19: ಚಿತ್ರಕಲೆಯನ್ನು ಆಸ್ವಾದಿಸುವ ಚಿತ್ರ ಕಲಾ ರಸಿಕರಿಗಾಗಿ ಆಯೋಜನೆ ಗೊಳ್ಳುವ ಚಿತ್ರಕಲಾ ಉತ್ಸವ ಕೊಡಗು 2019ರ ಪ್ರದರ್ಶನ ಮತ್ತು ಶಿಬಿರ ತಾ.21 ರಂದು ಉದ್ಘಾಟನೆಗೊಳ್ಳಲಿದೆ.

ವೀರಾಜಪೇಟೆ ನಗರದ ಹವ್ಯಾಸಿ ಚಿತ್ರ ಕಲಾವಿದ ಸಾದಿಕ್ ಹಂಸ ಅವರ ಆರ್ಟ್ ಸಾದಿಕ್ ಲಿಂಕ್ಸ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ‘ಕಲಾ ಉತ್ಸವ ಕೊಡಗು-2019’ ಎಂಬ ಶೀರ್ಷಿಕೆ ಯಡಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಪ್ರತಿಷ್ಠಾಪನಾ ಕಲೆ, ಛಾಯಾಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ಕಾರ್ಯಕ್ರಮ ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ಎಸ್.ಎಸ್. ರಾಮಮೂರ್ತಿ ರಸ್ತೆಯಲ್ಲಿರುವ ಸಾದಿಕ್ ಆರ್ಟ್ ಲಿಂಕ್ಸ್ ಕಲಾಭೂಮಿಯಲ್ಲಿ ತಾ.22 ರಿಂದ 27ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಛಾಯಾಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಸಂಕೇತ್ ಪೂವಯ್ಯ, ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಹಿರಿಯ ವಕೀಲ ಎಸ್.ಆರ್. ಜಗದೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ದರ್ಶನ, ಕರ್ನಾಟಕ ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿ.ಕೆ.ಬೋಪಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಪ.ಪಂ.ಸದಸ್ಯೆ ದೇಚಮ್ಮ ಕಾಳಪ್ಪ, ಉದ್ಯಮಿ ಎ.ಸಿ. ಜಾನ್ಸನ್, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕಾಂಗ್ರೆಸ್ ಕಾರ್ಯಕರ್ತ ಅಬ್ದುಲ್ ಸಲಾಂ, ಬಿಜೆಪಿ ಕಾರ್ಯಕರ್ತ ಜೋಕೀಂ ರೋಡ್ರಿಗಸ್, ಭತ್ತ ವ್ಯಾಪಾರಿ ಅಬ್ದುಲ್ ರೆಹಮಾನ್, ಕೊಡಗು ಸಮಾಚಾರ ಪತ್ರಿಕೆ ಸಂಪಾದಕ ಮನುಶೆಣೈ, ವಕೀಲರು ಹಾಗೂ ಸ್ನೇಹಭೂಮಿ ಟ್ರಸ್ಟ್‍ನ ಕಾರ್ಯದರ್ಶಿ ಕೆ.ವಿ ಸುನಿಲ್, ಟ್ರಸ್ಟ್‍ನ ಸದಸ್ಯ ಎ.ಎ.ಹಂಸ ಉಪಸ್ಥಿತರಿರುವರು. ಕಲಾವಿದರಿಂದ ಕಲೆಯ ಬಗ್ಗೆ ಮತ್ತು ಅವರ ಅನಿಸಿಕೆಗಳ ಸಂವಾದ ಕಾರ್ಯಕ್ರಮ, ಕಲಾಕೃತಿಗಳನ್ನು ನಿರ್ಮಾಣ ಮಾಡುವುದು, ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ, ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಕಲಾವಿದರುಗಳಾದ ಬಿ.ಆರ್.ಸತೀಶ್, ಪ್ರಸನ್ನ ಕುಮಾರ್, ಸುರೇಶ್ ಕೆ., ಉ.ರಾ.ನಾಗೇಶ್, ರೂಪೇಶ್ ನಾಣಯ್ಯ, ರಾಮ್ ಗೌತಮ್, ಅರುಣ ಗೌತಮ್,, ಕ್ಲಿಫರ್ಡ್ ಡಿಮೆಲ್ಲೋ, ಬಾವಾ ಮಾಲ್ದಾರೆ, ಜಯರಾಮ್, ಸಜಿತ್ ಕುಮಾರ್, ಚಂದ್ರಶೇಖರ್, ಪ್ರವೀಣ್ ವರ್ಣಕುಠೀರ, ವಹೀದ್ ಜಾನ್, ರವಿಚಂದ್ರನ್, ಸುನಾದ್, ಮಂಜುನಾಥ್, ಸಚಿನ್ ಬೆಳ್ಯಪ್ಪ, ಹರ್ಷ ಕಾವಾ, ವಿಠಲ್ ಸೋಮಯ್ಯ, ಸಂದೀಪ್ ಕುಮಾರ್, ಸಾದಿಕ್ ಹಂಸ, ಛಾಯಾಚಿತ್ರಗಾರರಾದ ಮಣಿಕಂಠ, ವಿನೋದ್ ಕುಮಾರ್, ರಚನ್, ದರ್ಶನ್ ಸುಬ್ಬಯ್ಯ ಭಾಗವಹಿಸಲಿ ದ್ದಾರೆ.

ಪ್ರದರ್ಶನಕ್ಕೆ ವೇದಿಕೆ

ಕಲಾ ಉತ್ಸವದ ಆಯೋಜಕ ಸಾದಿಕ್ ಹಂಸ ಅವರು ಪತ್ರಿಕೆ ಯೊಂದಿಗೆ ಮಾತನಾಡಿ ಕಲಾ ಉತ್ಸವವನ್ನು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರುತಿದ್ದು ಜಿಲ್ಲೆಯ ಹೆಸರಾಂತ ಚಿತ್ರಕಲಾವಿದರು ರಚಿಸಿದ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಮತ್ತು ಚಿತ್ರಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗು ಕಲಾ ಉತ್ಸವವನ್ನು ಅಯೋಜಿಸಿಕೊಂಡು ಬರುತಿದ್ದೇವೆ. ಕಲಾ ಉತ್ಸವದಲ್ಲಿ ಕೇರಳ ರಾಜ್ಯದ ಹೆಸರಾಂತ ರಾಜ್ಯ ಮತ್ತು ಅಂತರ್‍ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಕಲಾವಿದರು, ರಾಜ್ಯದ ಮತ್ತು ಜಿಲ್ಲೆಯ ಖ್ಯಾತ ಚಿತ್ರಕಲೆ, ಶಿಲ್ಪಕಲೆಯ ತಜ್ಞರು ಭಾಗವಹಿಸಲಿದ್ದಾರೆ. ಎಂದು ತಿಳಿಸಿದರು.