ನಾಪೋಕ್ಲು, ಡಿ. 19: ನಾಪೋಕ್ಲುವಿನ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಕಾರ್ಯಕ್ರಮವನ್ನು ತಾ. 25ರಂದು ಮಧ್ಯಾಹ್ನ 2ಗಂಟೆಗೆ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಕೇಲೇಟಿರ ಎಂ. ಬೋಪಣ್ಣ ಮಾಹಿತಿ ನೀಡಿದರು.

ವಿದ್ಯಾಸಂಸ್ಥೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿಬೋಪಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಶಾಲೆಯ ಹಳೆ ವಿದ್ಯಾರ್ಥಿ ಪ್ರಸ್ತುತ ಬೆಂಗಳೂರಿನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‍ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪಚೆಟ್ಟೋಳಂಡ ಸೋಮಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 1980ರಲ್ಲಿ ಶಾಲೆ ಆರಂಭವಾಗಿದ್ದು ಆಗಿನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಕೋಟೆರ ದಿಲೀಪ್ ದೇವಯ್ಯ, ಲತೇಶ್, ಅಪ್ಪಾರಂಡ ಚೇತನ್, ಡಾ.ಸಫಿಯ, ರೋಶನ್, ಮೇಜರ್ ಶಿವಚಾಳಿಯಂಡ ಗಿರೀಶ್, ಧನ್ಯ, ಬಲ್ಲಚಂಡ ಪೊನ್ನಮ್ಮ, ತಡಿಯಂಗಡ ಸೌಮ್ಯ, ಕೈಬುಲಿರ ಕುಟ್ಟಪ್ಪ, ಕೇಟೋಳಿರ ಅರುಣ್‍ದೇವಯ್ಯ, ಕುಲ್ಲೇಟಿರ ದರ್ಶನ್‍ಪೊನ್ನಣ್ಣ, ಇವರನ್ನು ಸನ್ಮಾನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ, ಉಪಾಧ್ಯಕ್ಷ ಕಲ್ಯಾಟಂಡ ಹ್ಯಾರಿಮಂದಣ್ಣ, ಸಂಘದ ಸ್ಥಾಪಕ ಅಧ್ಯಕ್ಷ ಕಲ್ಯಾಟಂಡ ಎಂ. ಪೂಣಚ್ಚ, ಪ್ರಾಂಶುಪಾಲೆ ಬಿ.ಎಂ. ಶಾರದ, ಹಿರಿಯ ಶಿಕ್ಷಕಿ ಕವಿತ, ಶೋಭಾ, ಹಳೆವಿದ್ಯಾರ್ಥಿ ಹಾಲಿ ಶಿಕ್ಷಕಿ ರೀನಾ, ಹಳೆವಿದ್ಯಾರ್ಥಿ ಸಂಘದ, ಕಾರ್ಯದರ್ಶಿ ಬಾಳೆಯಡ ಪ್ರತೀಶ್, ಸದಸ್ಯರಾದ ಕಲಿಯಂಡ ಕೌಶಿಕುಶಾಲಪ್ಪ, ಕೆಲೇಟಿರ ದೀಪುದೇವಯ್ಯ, ರಿಸ್ವಾನ್ ಹಾಗೂ ಶಫೀಕ್ ಇದ್ದರು.