ವೀರಾಜಪೇಟೆ, ಡಿ. 19: ಸದ್ಭಾವನಾಮಂಚ್ ವೀರಾಜಪೇಟೆ ಇದರ ಆಶ್ರಯದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಸ್ನೇಹಮಿಲನ ಕಾರ್ಯಕ್ರಮ ತಾ. 20ರಂದು (ಇಂದು) ಸಂಜೆ 4 ಗಂಟೆಗೆ ಸೈಂಟ್ ಆನ್ಸ್ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಚ್‍ನ ಕಾರ್ಯಾಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ ತಿಳಿಸಿದ್ದಾರೆ. ಮಾಜಿ ಸಚಿವ ಯಂ.ಸಿ. ನಾಣಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸದ್ಭಾವನಾ ಮಂಚ್ ರಾಜ್ಯ ಸಂಚಾಲಕ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಸೌಹಾರ್ದ ಸಂದೇಶ ನೀಡಲಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮಾಳೇಟಿರ ಬಿ. ಕಾವೇರಪ್ಪ ಹುತ್ತರಿ ಸಂದೇಶ ನೀಡಲಿದ್ದಾರೆ. ಸಮಾಜ ಸೇವಕ ಕೆ.ಟಿ. ಬೇಬಿ ಮಾಥ್ಯು, ನಿವೃತ್ತ ಶಿಕ್ಷಕ ನಾಯಡ ವಾಸು ನಂಜಪ್ಪ, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ.ಪಿ. ಕುಂಞÂಮುಹಮ್ಮದ್ ಅತಿಥಿಗಳಾಗಿರುತ್ತಾರೆ. ಸದ್ಭಾವನಾ ಮಂಚ್ ಸ್ಥಾನೀಯ ಅಧ್ಯಕ್ಷ ಡಾ. ಎಂ.ಸಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ನೇಹಮಿಲನದ ಅಂಗವಾಗಿ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.