ಮಡಿಕೇರಿ, ಡಿ.19 : ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಿಬ್ಬಂದಿ ಹಾಗೂ ಗಿರಿಜನ ಹಾಡಿ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಆರೋಗ್ಯ ಶಿಕ್ಷಣ ಮಾಹಿತಿ ವಸ್ತು ಪ್ರದರ್ಶನವು ನಾಗರಹೊಳೆಯ ಕಲ್ಲಹಳ್ಳದಲ್ಲಿ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಚಾಲನೆ &divound;ೀಡಿದರು. 65 ಜನರಿಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ನಡೆಸಲಾಯಿತು. ವೈದ್ಯಕೀಯ ಅಧೀಕ್ಷಕರಾದ ಡಾ.ಲೋಕೇಶ್, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಗೋಪಿನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್, ಎಸ್.ಎಂ.ಒ.ಡಾ.ಸುಧೀರ್ ನಾಯಕ್, ಅರಣ್ಯ ಅಧಿಕಾರಿಗಳಾದ ಅಮಿತ್, ಇತರರು ಇದ್ದರು.