ಪೊನ್ನಂಪೇಟೆ, ಡಿ. 18: ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿ ಉದಯೋನ್ಮುಖ ಕಬಡ್ಡಿ ಆಟಗಾರ ಎಂ.ಎಸ್. ದಿಲ್‍ಶಾದ್ ಕರ್ನಾಟಕ ಜೂನಿಯರ್ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದು, ತಾ. 28 ರಿಂದ 30ರ ವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ 2019ರ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ.

ಇವರು ನೆಲ್ಯಹುದಿಕೇರಿ ಗ್ರಾಮದ ಸೈಯದ್ ಯೂನಸ್ ಹಾಗೂ ಫಾತಿಮ ದಂಪತಿಯರ ಪುತ್ರನಾಗಿದ್ದು, ಸಿದ್ದಾಪುರದ ವಿ ಸೆವೆನ್ ಕಬಡ್ಡಿ ಕ್ಲಬ್‍ನ ಮೂಸ ಹಾಗೂ ಸಂತೋಷ್ ತರಬೇತಿ ನೀಡಿದ್ದಾರೆ. ಪ್ರಸ್ತುತ ಈತ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.