ಚೆಟ್ಟಳ್ಳಿ, ಡಿ. 18: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ವತಿಯಿಂದ ಸಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿ ನಲ್ಲಿ ಫುಟ್ಬಾಲ್ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಐಚ್ಚೆಟ್ಟೀರ ನರೇನ್ ಸುಬ್ಬಯ್ಯ (ಐಎನ್‍ಎಸ್) ಸ್ಪೋಟ್ರ್ಸ್ ಅಕಾಡೆಮಿಯಲ್ಲಿ ಎರಡು ದಿನಗಳ ಕಾಲ ಪ್ರಾಯೋಗಿಕ ಹಾಗೂ ವೈವಾ ಪರೀಕ್ಷೆಗಳು ನಡೆಯಿತು.
ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ಯೂನಿವರ್ಸಲ್ ಎಫ್.ಸಿ ರಂಗ ಸಮುದ್ರ ಹಾಗೂ ನೇತಾಜಿ ಯುವಕ ಸಂಘ ತಂಡಗಳ ನಡುವೆ ಪಂದ್ಯಾಟವನ್ನು ಏರ್ಪಡಿಸಿ ನೂತನ ತೀರ್ಪುಗಾರರಿಗೆ ಪ್ರಾಯೋಗಿಕ ಪರೀಕ್ಷೆ ನಡೆಯಿತು.
ನಂತರ ಫುಟ್ಬಾಲ್ ತೀರ್ಪು ಗಾರಿಕೆಯ ಬಗ್ಗೆ ವಿಶೇಷ ತರಬೇತಿ ಯನ್ನು ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ವಿಭಾಗದ ಮುಖ್ಯಸ್ಥರಾದ ಎಲೆನ್ಗೋವನ್, ಸತ್ಯಮೂರ್ತಿ ಹಾಗೂ ಲಿಯೋ ಅವರು ನೀಡಿದರು.
ನೂತನವಾಗಿ ಆಯ್ಕೆಯಾದ ಫುಟ್ಬಾಲ್ ತೀರ್ಪುಗಾರರು ಶ್ರದ್ಧೆ, ಆಸಕ್ತಿ ಹಾಗೂ ಸಮಯ ಪಾಲನೆಯನ್ನು ತಮ್ಮ ಫುಟ್ಬಾಲ್ ತೀರ್ಪುಗಾರಿಕೆಯಲ್ಲಿ ಅಳವಡಿಸಿ ಕೊಂಡಲ್ಲಿ ಮಾತ್ರ ತಮಗೆ ಉತ್ತಮ, ಯಶಸ್ವಿ ತೀರ್ಪುಗಾರರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ರಾಜ್ಯ ಉಪಾಧ್ಯಕ್ಷ ಟಿ. ಎಲೆನ್ಗೋವನ್ ಮಾತನಾಡಿ, ನೂತನವಾಗಿ ಆಯ್ಕೆಯಾದ ತೀರ್ಪುಗಾರರು ಸತತ ಮೂರು ವರ್ಷಗಳ ಪರೀಕ್ಷೆ ಹಾಗೂ ಕಠಿಣ ಅಭ್ಯಾಸವನ್ನು ಮಾಡಿದರೆ ತಮಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ತೀರ್ಪುಗಾರ ರಾಗಲು ಅವಕಾಶವಿದೆ ಎಂದರು.
ಐಎನ್‍ಎಸ್ ಕ್ರೀಡಾ ಅಕಾಡೆಮಿ ಮುಖ್ಯಸ್ಥ ಐಚ್ಚೆಟ್ಟೀರ ಪೊನ್ನಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾಗಿದೆ. ಜಿಲ್ಲೆಯಿಂದ ಆಯ್ಕೆ ಯಾದ ಫುಟ್ಬಾಲ್ ತೀರ್ಪುಗಾರರಿಗೆ ಐಎನ್‍ಎಸ್ ಅಕಾಡೆಮಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವು ದೆಂದು ತಿಳಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಸಂಘದ ಸದಸ್ಯರಾದ ಜಿ. ಮೂರ್ತಿ, ಲಿಯೋ, ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಪಿ.ಕೆ. ಜಗದೀಶ್ ರೈ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಅಧ್ಯಕ್ಷ ನಾಗೇಶ್ (ಈಶ್ವರ್), ತೀರ್ಪುಗಾರರಾದ ಪಿ.ಎಂ. ಇಬ್ರಾಹಿಂ, ಮಹೇಂದ್ರ ಇದ್ದರು.