ಸೋಮವಾರಪೇಟೆ, ಡಿ.18: ಬೆಂಗಳೂರು ಚಾಮರಾಜಪೇಟೆಯ ವಿನೋದ ಸಾಂಸ್ಕೃತಿಕ ವೇದಿಕೆ ಹಾಗೂ ರವಿಕಿರಣ್ ಅಭಿಮಾನಿಗಳ ಬಳಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮತ್ತು ಹಿರಿಯ ಛಾಯಾಗ್ರಾಹಕ ರವಿಕಿರಣ್ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆಯ ಎಂ.ಎ. ರುಬೀನಾ ಅವರಿಗೆ ಸಾಹಿತ್ಯ ಕ್ಷೇತ್ರದ ಸೇವೆಗಾಗಿ “ರವಿಕಿರಣ್ ಕರುನಾಡ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ರಂಗಭೂಮಿ ನಟ ನೀಲಕಂಠ ಅಡಿಗ, ಹಿರಿಯ ಗಾಯಕ ಶಶಿಧರ್ ಕೋಟೆ, ಬಳಗದ ಅಧ್ಯಕ್ಷ ಸುಶಾಂತ್, ಡಾ. ಇಂದಿರಾದೇವಿ ಮತ್ತಿತರು ಉಪಸ್ಥಿತರಿದ್ದರು.