ನಾಪೋಕ್ಲು, ಡಿ. 18: ಬಲಮುರಿಯ ನೆಟ್ಟೂರು ಗೌಡ ಸಂಘದ ಹುತ್ತರಿ ಊರೋರ್ಮೆ ಹಾಗೂ ವಾರ್ಷಿಕ ಮಹಾಸಭೆ ಕಟ್ರತನ ಮೊಟ್ಟೆಕೋಡಿ ಆಟದ ಮೈದಾನದಲ್ಲಿ ಜರುಗಿತು. ಪೊನ್ನಚನ, ಕಟ್ರತನ, ಕೊಟ್ಟಕೇರಿಯನ, ಈ ಮೂರು ಗೌಡ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಡ್ಲೇರ ತುಳಸಿ ಮೋಹನ್‍ಗೌಡ ಪಾಲ್ಗೊಂಡಿದ್ದರು. ನಂತರ ಮಾತನಾಡಿದ ಅವರು, ಗೌಡ ಸಂಸ್ಕøತಿ, ಆಚಾರ-ವಿಚಾರಗಳು ವಿಭಿನ್ನವಾಗಿದ್ದು, ಸಂಸ್ಕøತಿ ಉಳಿಸಿ-ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಫಿಟ್ನೆಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಟ್ರತನ ಬೆಳ್ಯಪ್ಪ (93) ಅವರನ್ನು ಮತ್ತು ಮೂರು ಕುಟುಂಬಗಳ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕಟ್ರತನ ಬಿ. ಲೋಕನಾಥ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಹಾಗೂ ವಕೀಲ ಕೊಟ್ಟಕೇರಿಯನ ದಯಾನಂದ ಸ್ವಾಗತಿಸಿದ ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಂಘದ ಕಾರ್ಯದರ್ಶಿ ಪೊನ್ನಚನ ರೋಹಿತ್ ಮಂಡಿಸಿದರು. ಕಟ್ರತನ ರೋಹಿಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.