ಗೋಣಿಕೊಪ್ಪಲು, ಡಿ. 18: ಇಲ್ಲಿನ ಕಾವೇರಿ ಕಾಲೇಜಿನ ಬಿಸಿಎ ವಿಭಾಗ ಹಾಗೂ ಐಕ್ಯೂಎಸಿ ಸೆಲ್‍ನ ಸಂಯುಕ್ತ ಆಶ್ರಯದಲ್ಲಿ ತಾ. 23 ರಂದು 6ನೇ ವರ್ಷದ ರಾಜ್ಯಮಟ್ಟದ ಕಾವೇರಿ ಅಚಿಂತ್ಯ ಟೆಕ್ನಿಕಲ್ ಫೆಸ್ಟ್ ಆಯೋಜಿಸಲಾಗಿದೆ.
ಫೆಸ್ಟ್‍ನಲ್ಲಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪದವಿ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬಹುದು. ಪದವಿಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಕ್ವಿಜ್, ಡ್ಯಾನ್ಸ್, ಗೇಮ್, ಟ್ರೆಶರ್ ಹಂಟ್ ಹಾಗೂ ಬಾಂಬ್ ಶೆಲ್ ಸ್ಪರ್ಧೆಗಳು ನಡೆಯಲಿವೆ. ಪದವಿ ವಿಭಾಗದ ಬಿಸಿಎ ವಿದ್ಯಾರ್ಥಿಗಳಿಗೆ ಕೋಡಿಂಗ್, ಪ್ರೊಡೆಕ್ಟ್ ಲಾಂಚ್, ಟ್ರೆಶರ್ ಹಂಟ್, ಶೂಟ್ ದಿ ಮೆಮೋರಿ ಹಾಗೂ ಕ್ವಿಜ್ ಸ್ಪರ್ಧೆಗಳು ನಡೆಯಲಿವೆ. ಕಾವೇರಿ ಕಾಲೇಜಿನ ಬಿಸಿಎ ವಿಭಾಗದ ಹಳೇ ವಿದ್ಯಾರ್ಥಿಗಳಿಗೆ ಟ್ರೆಶರ್ ಮೇನಿಯಾ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಇವರ ಮೊಬೈಲ್ ಸಂಖ್ಯೆ 7899147627 ಕ್ಕೆ ಸಂಪರ್ಕಿಸುವಂತೆ ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ತಿಳಿಸಿದ್ದಾರೆ.