ಮಡಿಕೇರಿ, ಡಿ. 17: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಕುಂಜಿಲನ ಬಿ. ಸತೀಶ್ ಪೂಣಚ್ಚ 5ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಡಿಕೇರಿಯ ಕೋಟೆ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರಿನಿಂದ ಆಗಮಿಸಿದ್ದ ರಾಜ್ಯ ಅಧ್ಯಕ್ಷರಾದ ಡಾ. ಎಸ್.ಎಂ. ಕೃಷ್ಣ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 2019-2022ನೇ ಸಾಲಿನ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳ ಘೋಷಣೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಅಧ್ಯಕ್ಷರಾಗಿ 5ನೇ ಬಾರಿಗೆ ಮಡಿಕೇರಿಯ ಕೆ.ಬಿ. ಪೂಣಚ್ಚ ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎನ್. ರವಿಚಂದ್ರ ಮಡಿಕೇರಿ, ಖಜಾಂಚಿಯಾಗಿ ಮೊಹಮ್ಮದ್ ಶರೀಫ್ ಜಿ.ಎಂ. ಮಡಿಕೇರಿ, ಉಪಾಧ್ಯಕ್ಷರಾಗಿ ಬಿ.ಎಸ್. ಮಂಜುನಾಥ್ ಕುಶಾಲನಗ ಹಾಗೂ ಎನ್.ಜಿ. ಸುರೇಶ್ ಗೋಣಿಕೊಪ್ಪ, ಸಹ ಕಾರ್ಯದರ್ಶಿಯಾಗಿ ಸುಬ್ರಮಣಿ ವಿ. ಗೋಣಿಕೊಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜೆ. ವಸಂತ ರೈ ಕುಶಾಲನಗರ ಹಾಗೂ ಕೊಡಗಿನ ವಿವಿಧ ಭಾಗಗಳಿಂದ ಚುನಾಯಿತರಾದ 10 ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು.
ಈ ಸಂದರ್ಭ ಚೆಟ್ಟಳ್ಳಿಯ ಕೂಡ್ಲೂರಿನ ಪಿ.ವಿ. ಅಚ್ಚುತ, ಗೋಣಿಕೊಪದ್ಪ ಪಿ.ವಿ. ಚಂದ್ರನ್, ಮಡಿಕೇರಿಯ ಎಂ.ಕೆ. ಕುಶಾಲಪ್ಪ, ಕೊಡ್ಲಿಪೇಟೆಯ ಬಿ.ಎಂ. ಅಜ್ಜಯ್ಯ ಅವರನ್ನು ಸನ್ಮಾನಿಸಲಾಯಿತು.