ಚೆಟ್ಟಳ್ಳಿ, ಡಿ. 17: ಕೊಡವ ಮಕ್ಕಡ ಕೂಟ, ನಾಪೋಕ್ಲು ಕೊಡವ ಸಮಾಜ, ರಂಗಭೂಮಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ಬದ್ಕ್ ಮತ್ತು ದೇಚವ್ವ ಕೊಡವ ಪುಸ್ತಕ ಹಾಗೂ ಹರದಾಸ ಅಪ್ಪಚ್ಚಕವಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಬದ್ಕ್ ನಾಟಕ ಪ್ರದರ್ಶನ ಜರುಗಿತು.
ಬದ್ಕ್ ಮತ್ತು ದೇಚವ್ವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದÀ ಸರ್ವೇ ಆಫ್ ಇಂಡಿಯಾದ ನಿವೃತ್ತ ಗೆಜೆಟ್ ಆಫೀಸರ್ ಕೇಟೋಳಿರ ಎಸ್. ಕುಟ್ಟಪ್ಪ ಮಾತನಾಡಿ, ಜನಾಂಗದಲ್ಲಿ ಒಗ್ಗಟ್ಟು, ಒತ್ತೊರ್ಮೆ ದಿನೇ ದಿನೇ ಕಡಿಮೆಯಾಗುತಿರುವುದು ವಿಷಾದÀÀನೀಯ ಎಂದರು.
ಕೈಲ್ಪೊಳ್ದ್, ಪುತ್ತರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಅವರು ಹರದಾಸ ಅಪ್ಪಚ್ಚಕವಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಜನಾಂಗದ ಸಂಸ್ಕøತಿ, ಆಚಾರ, ವಿಚಾರದ ಉಳಿವಿಗಾಗಿ ನಾಟಕ ಪ್ರದರ್ಶನದ ಮೂಲಕ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಪರಿಶ್ರಮವನ್ನು ಶ್ಲಾಘಿಸಿದರು. ಹಲವು ವರ್ಷಗಳ ಹಿಂದೆ ಕೊಡಗು ‘ರಾಜ್ಯ’ ಎಂಬ ನಾಟಕದ ಪ್ರದರ್ಶನ ವನ್ನು ಹಳ್ಳಿಹಳ್ಳಿಗಳಲ್ಲಿ ಪ್ರದರ್ಶಿಸಿದ ಅನುಭವದ ಬಗ್ಗೆ ತಿಳಿಸಿದರು.
ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಈ ಬದ್ಕ್ ಹಾಗೂ ದೇಚವ್ವ ಕೊಡವ ನಾಟಕ ಸಂಸಾರಿಕ ಬದುಕಿಗೊಂದು ಪಾಠವಾಗಿದ್ದು ಪ್ರತಿಯೊಬ್ಬರ ಬದುಕಿನಲ್ಲೂ ಮಾದರಿಯಾಗಲೆಂದು ಈ ನಾಟಕ ಪ್ರದರ್ಶನ ಮಾಡುತ್ತಿದ್ದೇವೆ. ಹಲವೆಡೆ ಪ್ರದರ್ಶನಗೊಂಡು ಹಿರಿಯ ಖ್ಯಾತ ನಾಟಕಗಾರ ಅಪ್ಪನೆರವಂಡ ಅಪ್ಪಚ್ಚ ಕವಿ ಹುಟ್ಟಿದ ನಾಡಾದ ನಾಪೋಕ್ಲುವಿನಲ್ಲಿ 55ನೇ ನಾಟಕ ಪ್ರದರ್ಶನ ಮಾಡಲು ಹೆಮ್ಮೆ ಇದೆ ಎಂದರು. ಕೊಡವ ಸಂಸ್ಕøತಿ, ಆಚಾರ ವಿಚಾರ ಪದ್ಧತಿ, ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಿರುವ ಬೊಳ್ಳಜಿರ ಅಯ್ಯಪ್ಪ ಅವರ ಮುಂದಾಳತ್ವ ಕೊಡವ ಮಕ್ಕಡ ಕೂಟದ ತಂಡವನ್ನು ಶ್ಲಾಘಿಸಿದರು. ರಂಗಭೂಮಿ ಪ್ರತಿಷ್ಠಾನದ ವತಿಯಿಂದ ಪೊನ್ನಂಪೇಟೆಯಲ್ಲಿ ರಂಗಮಂಟಪ ವನ್ನು ಸ್ಥಾಪಿಸಲು ಮುಂದಾಗಿರುವ ಬಗ್ಗೆ ತಿಳಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಂಸಾರಿಕ ಬದುಕಿನ ಜಂಜಾಟವನ್ನು ಕಥಾರೂಪದಲ್ಲಿ ಎಣೆದು ಜೀವನೀಡಿ ಬದ್ಕ್ ನಾಟಕದ ಮೂಲಕ ರಂಗಕರ್ಮಿ ಅಡ್ಡಂಡ ಕಾರ್ಯ ಅವರು ಪ್ರದರ್ಶಿಸುತ್ತಿದ್ದಾರೆ. ಇದನ್ನು ದಾಖಲೆಪಡಿಸುವ ಉದ್ದೇಶದಿಂದ ಬದ್ಕ್ ಪಿಂಞ ದೇಚವ್ವ ನಾಟಕವನ್ನು ಕೊಡವ ಮಕ್ಕಡ ಕೂಟದ ಕೊಡವ ಸಾಹಿತ್ಯಮಾಲೆಯ 38ನೇ ಪುಸ್ತಕವಾಗಿ ಹೊರತಂದಿದ್ದೇವೆಂದರು.
ಫೆಬ್ರವರಿ 18ಕ್ಕೆ ಕೂಟದ ಅಧ್ಯಕ್ಷ ಸ್ಥಾನಕೊನೆಗೊಳ್ಳಲಿದ್ದು, ಮುಂದಿನ ಅಧ್ಯಕ್ಷ ಸ್ಥಾನವನ್ನು ಕೊಡವ ಮಕ್ಕಡ ಕೂಟದ ಟ್ರಸ್ಟಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಾಳೆಯಡ ಪ್ರತಿಶ್ ಪೂವಯ್ಯ ವಹಿಸಲಿದ್ದಾ ರೆಂದರು. ನಾಪೋಕ್ಲು ಪೊಮ್ಮಕ್ಕಡ ಪರಿಷತ್ನ ಅಧ್ಯಕ್ಷೆ ಮೂವೆರ ರೇಖಾಪ್ರಕಾಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಮೊದಲ ಬಾರಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಹಾಗೂ ಅನಿತ ಕಾರ್ಯಪ್ಪನವರ ಸಾಂಸಾರಿಕ ಬದುಕಿನ ಬದ್ಕ್ ಕೊಡವ ನಾಟಕ ಪ್ರದರ್ಶನವಾಗುತ್ತಿರುವದು ಹೆಮ್ಮೆ ಎಂದರು. ಸಂಚಾಲಕಿ ಕೊಡವ ಮಕ್ಕಡ ಕೂಟ ಬಾಳೆಯಡ ದಿವ್ಯಾ ಮಂದಪ್ಪ ಹಾಜರಿದ್ದರು.
ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಪ್ರಾರ್ಥಿಸಿ, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತಿಸಿ, ಕುಂಡ್ಯೋಳಂಡ ವಿಶುಪೂವಯ್ಯ, ಅಡ್ಡಂಡ ಕಾರ್ಯಪ್ಪ ಅವರ ಪರಿಚಯಿಸಿದರು. ಬಿದ್ದಂಡ ಉಷಾ ದೇವಮ್ಮ ವಂದಿಸಿ, ಬೊಳ್ಳಜಿರ ಅಯ್ಯಪ್ಪ ನಿರೂಪಿಸಿದರು.
ಜನಮೆಚ್ಚುಗೆಯಾದ ಬದ್ಕ್ ನಾಟಕ ಪ್ರದರ್ಶನ...
ಬದ್ಕ್ ಮತ್ತು ದೇಚವ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಂತರ ಬದ್ಕ್ ಕೊಡವ ನಾಟಕ ಪ್ರದರ್ಶನಗೊಂಡು ಮುಖ್ಯಪಾತ್ರದಲ್ಲಿ ಅಡ್ಡಂಡ ಕಾರ್ಯಪ್ಪ ಚಂಗಪ್ಪಜ್ಜನ ಪಾತ್ರ, ಅನಿತ ಕಾರ್ಯಪ್ಪ ತಂಗಚ್ಚಿ ಪಾತ್ರದಲ್ಲಿ ಕಾಣಿಸಿಕೊಂಡರೆ ಚುಬ್ರನ ಪಾತ್ರ ನಾಟಕಕ್ಕೆ ಕಳೆ ನೀಡಿತ್ತು. ಸಾಂಸಾರಿಕ ಬದುಕಿನ ಕಥೆಯನ್ನು ಹಾಸ್ಯದ ಮೂಲಕ ಪ್ರದರ್ಶಿಸಿ ಜನಮನ್ನಣೆಗೆ ಪಾತ್ರವಾಯಿತು.
-ಕರುಣ್ ಕಾಳಯ್ಯ