ಸೋಮವಾರಪೇಟೆ, ಡಿ. 17: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವ ಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ಸಾಹಿತ್ಯ ಭವನದಲ್ಲಿ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜನವರಿ 10 ರಂದು ಇಲ್ಲಿನ ಸಾಹಿತ್ಯ ಭವನದಲ್ಲಿ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುವದು. ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಛದ್ಮವೇಷ ಸ್ಪರ್ಧೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಬಲಿಷ್ಠ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸುವಂತೆ ನಿರ್ಧರಿಸಲಾಯಿತು. ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭವನ್ನು ಜನವರಿ 27 ರಂದು ಸಾಹಿತ್ಯ ಭವನದಲ್ಲಿ ನಡೆಸುವಂತೆ, ಗಣರಾಜ್ಯೋತ್ಸವ ಅಂಗವಾಗಿ ಸಮಾಜ ಸೇವಕಿ ಮಣವಟ್ಟೀರ ಶಾರದ ಮಂದಣ್ಣ, ಮಾಜಿ ಸೈನಿಕ ನಂಗಾರು ಚಂದ್ರಕುಮಾರ್ ಅವರನ್ನು ಸನ್ಮಾನಿಸುವಂತೆ ತೀರ್ಮಾನಿಸ ಲಾಯಿತು. ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಮೊ: 9845005453 ನ್ನು ಸಂಪರ್ಕಿ ಬಹುದು ಎಂದು ಕಸಾಪ ತಾಲೂಕು ಅಧ್ಯಕ್ಷ ವಿಜೇತ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕ.ಸಾ.ಪ. ನಿರ್ದೇಶಕ ತೇಲಪಂಡ ಕವನ್ ಕಾರ್ಯಪ್ಪ, ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಹೆಚ್.ಜೆ. ಜವರಪ್ಪ, ಪದಾಧಿಕಾರಿ ಗಳಾದ ರಾಣಿ ರವೀಂದ್ರ, ಸಿ.ಕೆ. ಮಲ್ಲಪ್ಪ, ಕೆ.ಪಿ. ದಿನೇಶ್, ನ.ಲ. ವಿಜಯ, ಕೆ.ಪಿ. ಸುದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.