ಇಂದು ಜನಸಾಮಾನ್ಯರನ್ನು ಕಾಡುತ್ತಿರುವ ಬಹುತೇಕ ರೋಗ ಗಳಿಗೆ ಸೊಳ್ಳೆಗಳೇ ಕಾರಣ. ಸೊಳ್ಳೆ ಗಳ ಕಡಿತದಿಂದ ಡೆಂಗ್ಯೂ, ಚಿಕನ್‍ಗುನ್ಯಾ ಮತ್ತು ಮಲೇರಿಯಾ ದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಂದ ಪಾರಾಗಲು ಜನರು ಸೊಳ್ಳೆಬತ್ತಿಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ. ಸೊಳ್ಳೆಬತ್ತಿಗಳು ಸೊಳ್ಳೆಗಳನ್ನು ತಾತ್ಕಾಲಿಕವಾಗಿ ಓಡಿಸುತ್ತ್ತವೆಯಾದರೂ ಅವುಗಳ ಅಡ್ಡಪರಿಣಾಮಗಳಿಂದ ತಲೆನೋವು, ಹೊಟ್ಟೆ ತೊಳಸುವಿಕೆ, ವಾಂತಿ, ಅಲರ್ಜಿ ಮುಂತಾದವುಗಳಿಂದ ಜನರು ಬಳಲುತ್ತಿದ್ದಾರೆ. ಇತ್ತೀಚಿನ ಮಲೇಶಿಯಾ ಹಾಗೂ ಚೀನಾದ ಸೊಳ್ಳೆಬತ್ತಿಗಳ ಮೇಲೆ ನಡೆದ ಸಂಶೋಧನೆಗಳಿಂದ ತಿಳಿದು ಬಂದಿರುವದೇನೆಂದರೆ, ಒಂದು ಸೊಳ್ಳೆಬತ್ತಿಯನ್ನು ಸುಡುವುದರಿಂದ ಹೊರಸೂಸುವ ಹಾನಿಕಾರಕ ರಾಸಾಯನಿಕಗಳು 50 ಸಿಗರೇಟಿನಿಂದ ಉತ್ಪತ್ತಿಯಾಗುವ ರಾಸಾಯನಿಕ ಗಳಿಗೆ ಸಮ. ಇವೆಲ್ಲ ತಿಳಿಯದೆ ಇರುವುದರಿಂದ ಜನರು ನಿತ್ಯವೂ ಸೊಳ್ಳೆಬತ್ತಿಯನ್ನು ಬಳಸುತ್ತಿದ್ದಾರೆ. ಇದರಿಂದ ಬರುವ ರೋಗಗಳು ದಿನದಿಂದದಿನಕ್ಕೆ ಜನರನ್ನು ಚಿಂತೆಗೀಡುಮಾಡಿವೆ. ಇವೆಲ್ಲದಕ್ಕೂ ಪರಿಹಾರವೆಂದರೆ, ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುವುದು. ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಚರಂಡಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಇತರೆ ಘನತ್ಯಾಜ್ಯಗಳನ್ನು ಹಾಕದೆ ಸರಾಗವಾಗಿ ನೀರು ಹೊರಹೋಗುವಂತೆ ನೋಡಿಕೊಳ್ಳ ಬೇಕು. ಇದರಿಂದ ಸೊಳ್ಳೆಯ ಸಂತಾನೋತ್ಪತ್ತಿಯು ಆಗದೆ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತವೆ. ಇದರ ಜೊತೆಗೆ ಚೆಂಡು ಹೂಗಳ ಗಿಡಗಳನ್ನು ಮನೆಯಂಗಳ ದಲ್ಲಿ ಬೆಳೆಸುವುದರಿಂದ ಸೊಳ್ಳೆಗಳನ್ನು ದೂರ ಇಡಬಹುದು. ಇವೆಲ್ಲದರ ಜೊತೆ ನಮ್ಮ ಪರಂಪರಾಗತ ಪದ್ಧತಿಗಳನ್ನು ಬಳಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸೊಳ್ಳೆಯಿಂದ ಮುಕ್ತಿ ಪಡೆಯಬಹುದು. ಅವುಗಳೆಂದರೆ ಬೇವಿನಸೊಪ್ಪಿನ ಹೊಗೆ ಹಾಕುವುದು, ನೀಲಗಿರಿಸೊಪ್ಪು ಅಥವಾ ನೀಲಗಿರಿ ಎಣ್ಣೆಯನ್ನು ಬಳಸುವುದು, ಅಥವಾ ಇವೆಲ್ಲವನ್ನೂ ಮಿಶ್ರಣಮಾಡಿ ಕಡಿಮೆ ಖರ್ಚಿನಲ್ಲಿ ಸೊಳ್ಳೆಬತ್ತಿಗಳನ್ನು ನಾವೇ ತಯಾರಿಸಿ ಕೊಳ್ಳಬಹುದು. ಇದರಿಂದ ನಮ್ಮ ಆರೋಗ್ಯಕ್ಕೂ ಸಮಸ್ಯೆಯಾಗದೇ ಪರಿಣಾಮಕಾರಿಯಾಗಿ ಸೊಳ್ಳೆಗಳಿಂದ ಮುಕ್ತಿ ಪಡೆಯ ಬಹುದಾಗಿದೆ.
?ದೀಪ್ತಿ. ಸಿ. ಜೆ.,
ಜ್ಞಾನಗಂಗಾ ಶಾಲೆ, ಅತ್ತೂರು