ಮಡಿಕೇರಿ, ಡಿ. 17: ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಕೌಶಲ್ಯ ಉಚಿತ ತರಬೇತಿ ಹಾಗೂ ಉದ್ಯೋಗ ಸಹಾಯ ದೊರೆಯಲಿದೆ. ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್ 55 ದಿನಗಳು, ರಿಟೇಲ್ ಸೇಲ್ಸ್ ಅಸೋಸಿ ಯೇಟ್ 45 ದಿನಗಳು, ಡೊಮೆಸ್ಟಿಕ್ ಐಟಿ ಹೆಲ್ಪ್ಪ್‍ಡೆಸ್ಕ್ ಅಟೆಂಡರ್ 55 ದಿನಗಳು. ವಿದ್ಯಾರ್ಹತೆ ಎಸ್‍ಎಸ್ ಎಲ್‍ಸಿ, ಐಟಿಐ, ಡಿಪ್ಲಮಾ ಮತ್ತು ಪದವಿ, ವಯೋಮಿತಿ 18 ರಿಂದ 35 ವರ್ಷ ಯುವಕ ಯುವತಿಯರು ಸೂಕ್ತ ದಾಖಲಾತಿಗಳೊಂದಿಗೆ ಭೇಟಿ ನೀಡ ಬಹುದು. ದಾಖಲೆಗಳು: ವಿಳಾಸ ದಾಖಲೆ (ಆಧಾರ್), ಶೈಕ್ಷಣಿಕ ದಾಖಲೆ, ಬ್ಯಾಂಕ್ ಖಾತೆ ವಿವರ, 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಎಕ್ಸೆಲಸ್ ಲರ್ನಿಂಗ್ ಸಲ್ಯೂಷನ್ಸ್ ಪ್ರೈ.ಲಿ., 2ನೇ ಮಹಡಿ, ಶಾನುಭಾಗ್ ಕೇಂದ್ರ ಎಸ್.ಎಸ್. ರಾಮ ಮೂರ್ತಿ ರಸ್ತೆ, ವೀರಾಜಪೇಟೆ, ದೂ. 08274298831ನ್ನು ಸಂಪರ್ಕಿಸಬಹುದು.