ಗೋಣಿಕೊಪ್ಪ ವರದಿ, ಡಿ. 15: ವೀರಾಜಪೇಟೆ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕುಕ್ಲೂರು ಮುಖ್ಯರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು. ರಸ್ತೆಯ ಬದಿಯಲ್ಲಿನ ಪ್ಲಾಸ್ಟಿಕ್, ಕಸವನ್ನು ಸ್ವಚ್ಛಗೊಳಿಸಲಾಯಿತು. ಎಬಿವಿಪಿ ಪ್ರಮುಖ್ ಸುಜನ್ ಅಪ್ಪಯ್ಯ, ಪ್ರಮುಖರಾದ ವಿಕಿತಾ, ಲಾವಣ್ಯ, ಹೇಮಾವತಿ, ಪೂಜಾ, ಶಿನೋಜ್ ಇತರರು ಇದ್ದರು.