ಗೋಣಿಕೊಪ್ಪ ವರದಿ, ಡಿ. 15: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಲೋಪಮುದ್ರ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ಡಯಾಲಿಸಿಸ್ ಯೂನಿಟ್ ಹಾಗೂ ಶೀತಲಿಕೃತ ಶವ ಪೆಟ್ಟಿಗೆ ಯೂನಿಟ್ ಅನ್ನು ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ವೀಕ್ಷಣೆ ಮಾಡಿದರು.

ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಸುಮಾರು ರೂ. 5 ಲಕ್ಷದ ಯೋಜನೆ ಅನುಷ್ಠಾನ ಮಾಡಿರುವ ಸ್ಥಳೀಯ ಲಯನ್ಸ್ ಕ್ಲಬ್ ಸೇವಾ ಕಾರ್ಯ ಮತ್ತಷ್ಟು ಜನರಿಗೆ ಸಿಗುವಂತಾಗಬೇಕು. ನೂತನ ತಂತ್ರಗಾರಿಕೆ ಮೂಲಕ ಶವವನ್ನು ಇಡಲು ನೀಡಿರುವ ಶವ ಪೆಟ್ಟಿಗೆ ಕಾರ್ಯ ಕೂಡ ಮೆಚ್ಚುವಂತದ್ದು ಎಂದರು.

ಈ ಸಂದರ್ಭ ಲಯನ್ಸ್ ಪ್ರಮುಖರಾದ ಅನಿತಾ ಗೋಮ್ಸ್, ಸಂಜೀತ್ ಶೆಟ್ಟಿ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ, ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ, ಲೋಪಮುದ್ರ ಆಸ್ಪತ್ರೆ ಪ್ರಮುಖ ವೈದ್ಯ ಡಾ. ಅಮೃತ್ ನಾಣಯ್ಯ ಇದ್ದರು.