ಮಡಿಕೇರಿ, ಡಿ. 15: ದೇಶದ ಪ್ರತಿಷ್ಟಿತ ಐ.ಪಿ. ಅಟೋರ್ನಿ ಸಂಸ್ಥೆಯಾದ ಮೆ. ಖುರಾನ ಮತ್ತು ಖುರಾನ ಸಂಸ್ಥೆಯವರು ನಡೆಸಿದ ಅಂತರರಾಷ್ಟ್ರೀಯ ಪೇಟೆಂಟ್ ಡ್ರಾಫ್ಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ದೇಚಕ್ಕ ಚಂಗಪ್ಪ ಅವರು ಸಾಫ್ಟ್‍ವೇರ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಫಾರ್ಮ ಬೈಟಿಕ್ಕೋಲಾಜಿ ಮತ್ತು ಕೆಮಿಕಲ್ ಸಿಂಪೋಲಿಯಮ್‍ನಲ್ಲಿ ಮುಂಬೈಯಿಯ ಹಿಲ್ಟನ್ ಅಂತರರಾಷ್ಟ್ರೀಯ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಮಂಗಳೂರಿನ ಜೆರೋಸ ಶಾಲೆ, ಕೆನರಾ ಪಿ.ಯು. ಕಾಲೇಜು ಮತ್ತು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಐ.ಪಿ. ಮ್ಯಾಟ್ರಿಕ್ಸ್ ಸಂಸ್ಥೆಯಲ್ಲಿ ಪೇಟೆಂಟ್ ಅನಾಲಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರಿನ ನ್ಯಾಯವಾದಿಗಳಾದ ಸೋಮೆಯಂಡ ಪಿ. ಚಂಗಪ್ಪ ಮತ್ತು ಮಲ್ಲಿಕಾ ದಂಪತಿಯ ಪುತ್ರಿ.