ವೀರಾಜಪೇಟೆ, ಡಿ. 14: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಪರಿಶಿಷ್ಟ ಕಾಲೋನಿಗೆ ರೂ. 26 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ಮಾಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಬೋಪಯ್ಯ, ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ರಸ್ತೆ ಬದಿಯ ತೋಟ ಮಾಲೀಕರು ಸಹಕರಿಸಬೇಕು. ಅದೇ ರೀತಿ ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶ್ರಮ ಕಾಲೋನಿಗೆ ರೂ. 16 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಮತ್ತು ಶಾಸಕರ ನಿಧಿಯಿಂದ ಹಲವಾರು ಜನಪರ ಅಭಿವೃದ್ಧಿ ಕಾವiಗಾರಿಗಳನ್ನು ನಡೆಸÀಲಾಗುತ್ತಿದ್ದು, ಗ್ರಾಮಸ್ಥರು ಕಾಮಾಗಾರಿ ಕಳಪೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾವತಿ, ಎಸ್‍ಡಿಎಂಸಿ ಅಧ್ಯಕ್ಷ ಸೋಮಶೇಖರ್, ಗ್ರಾಮಸ್ಥರಾದ ಜಿ.ಜೆ. ಬೋಪಣ್ಣ, ಬಿಜೆಪಿ ಮುಖಂಡರಾದ ಮಲ್ಲಂಡ ಮಧು ದೇವಯ್ಯ, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.