ವೀರಾಜಪೇಟೆ, ಡಿ. 14: ವ್ಯಾಯಾಮ ಹಾಗೂ ದೈಹಿಕ ಆರೋಗ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಮೀಪದ ಮಗ್ಗುಲದಲ್ಲಿನ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ನಟ ಮಿಲಿಂದ್ ಸೋಮನ್ ನೇತೃತ್ವದಲ್ಲಿ ಇತ್ತೀಚೆಗೆ ಮ್ಯಾರಥಾನ್ ಆಯೋಜಿಸಲಾಗಿತ್ತು.
ಕೊಡಗು ದಂತ ವೈದ್ಯಕೀಯ ಮಹಾ ವಿದ್ಯಾಲಯದಿಂದ ಮಗ್ಗುಲ ಗ್ರಾಮದ ಮುಖ್ಯ ರಸ್ತೆಯವರೆಗೆ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಮಿಲಿಂದ್ ಸೋಮನ್ ಅವರೊಂದಿಗೆ ಗಾಲ್ಫ್ ಆಟಗಾರ ನಿಕ್ಕಿ ಪೊನ್ನಪ್ಪ ಹಾಗೂ ದಂತ ಮಹಾವಿದ್ಯಾಲಯದ ಡೀನ್ ಡಾ. ಸುನಿಲ್ ಮುದ್ದಯ್ಯ ಭಾಗವಹಿಸಿದ್ದರು. ಮ್ಯಾರಥಾನ್ ಓಟದಲ್ಲಿ 200 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.