ಕಣಿವೆ, ಡಿ. 14: ಕಳೆದ ಎರಡೂವರೆ ವರ್ಷಗಳ ಹಿಂದೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಳಿ ಆರಂಭಗೊಂಡ ಸರ್ಕಾರಿ ಆಯುರ್ವೇದ ಮತ್ತು ಹೋಮಿ ಯೋಪತಿ ಆಸ್ಪತ್ರೆಗೆ ಸರ್ಕಾರದ ಕಾಯಕಲ್ಪಕ್ಕಾಗಿ ಕಾದಿದೆ. ಜಿಲ್ಲಾ ಆಯುಷ್ ಇಲಾಖೆಯಿಂದ ಮಂಜೂ ರಾತಿಗೊಂಡ ಆಯುರ್ವೇದ ಆಸ್ಪತ್ರೆ ಯನ್ನು ತಾತ್ಕಾಲಿಕವಾಗಿ ಕುಶಾಲ ನಗರ ಸರ್ಕಾರಿ ಆಸ್ಪತ್ರೆಯ ವೈದ್ಯ ಸಿಬ್ಬಂದಿ ವಸತಿಗೃಹದ ಬಳಿ ಆರಂಭಿಸಲಾಯಿತಾದರೂ, ಇದೂವರೆಗೂ ಸೂಕ್ತ ವೈದ್ಯರ ನ್ನಾಗಲೀ, ಸಿಬ್ಬಂದಿಗಳನ್ನಾಗಲೀ, ಸ್ವಂತ ಕಟ್ಟಡವನ್ನಾಗಲೀ ಒದಗಿಸಲಿಲ್ಲ. ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅಂದು ಆಸ್ಪತ್ರೆಯ ಉದ್ಘಾಟನೆಗೂ ಆಗಮಿಸಿರಲಿಲ್ಲ. ಅಂದಿನಿಂದ ಇಂದಿನ ತನಕವೂ ಆಸ್ಪತ್ರೆ ಹೇಗೆ ನಡೆಯುತ್ತಿದೆ ಎಂದು ಸೌಜನ್ಯಕ್ಕೂ ನೋಡಲೂ ಕೂಡ ಆಗಮಿಸಿಲ್ಲ. ಹೀಗಿರುವಾಗ ಈ ಆಸ್ಪತ್ರೆಯ ಅಭಿವೃದ್ಧಿಗೆ ಯತ್ನಿಸುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ. ಬಡರೋಗಿಗಳ ಪಾಲಿನ ಆಶಾಕಿರಣವಾಗಿ ಆರಂಭಗೊಂಡ ಈ ಆಸ್ಪತ್ರೆಯಲ್ಲಿ ಸೌಲಭ್ಯಗಳು ಸಜ್ಜುಗೊಳ್ಳಬೇಕು. ಈ ಆಸ್ಪತ್ರೆಗೆ ಹೋಮಿಯೋಪತಿ ಹಾಗೂ ಆಯುರ್ವೇದ ವಿಭಾಗಕ್ಕೆ ತಲಾ ಓರ್ವ ವೈದ್ಯರು ನೇಮಕವಾಗಬೇಕಿದೆ. ಇನ್ನು ತಲಾ ಓರ್ವ ಔಷಧಿ ವಿತರಕರು, ಅಡಿಗೆಯವರು, ಆಸ್ಪತ್ರೆ ಸಹಾಯಕರು ನೇಮಕವಾಗಬೇಕು. ಅತ್ಯಂತ ಹೆಚ್ಚು ಹೊರರೋಗಿಗಳು ಚಿಕಿತ್ಸೆಗೆ ಆಗಮಿಸುವ ಸರ್ಕಾರಿ ಆರೋಗ್ಯ ಕೇಂದ್ರದ ಬಳಿಯಲ್ಲಿ ಆರಂಭವಾಗಿರುವ ಈ ಆಯುರ್ವೇದ ಆಸ್ಪತ್ರೆಯಲ್ಲಿ ದೊರಕುವ ಗುಣಮಟ್ಟದ ಆಯುರ್ವೇದ ಗುಳಿಗೆಗಳು ಮತ್ತು ಆರೋಗ್ಯ ಸೇವೆಗಳ ಬಗ್ಗೆ ಇದೂವರೆಗೂ ಜನಸಾಮಾನ್ಯರಿಗೆ ಅಷ್ಟೇನು ಮಾಹಿತಿ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಅಂದರೆ ತಪ್ಪಲ್ಲ. ಈ ಆಸ್ಪತ್ರೆಯ ಸುಧಾರಣೆ ಬಗ್ಗೆ ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ರಾಮಚಂದ್ರ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಶಾಶ್ವತವಾದ ಕಟ್ಟಡವೊಂದನ್ನು ನಿರ್ಮಿಸುವ ಸಂಬಂಧ ಈಗಾಗಲೇ ಸರ್ಕಾರದೊಂದಿಗೆ ವ್ಯವಹರಿಸಲಾಗಿದೆ. ಕುಶಾಲನಗರ ಮಾತ್ರವಲ್ಲ. ಇಡೀ ಕೊಡಗು ಜಿಲ್ಲೆಯಲ್ಲಿ 10 ಆಯುರ್ವೇದ ಆಸ್ಪತ್ರೆಗಳಿಗೆ ವೈದ್ಯರಿಲ್ಲ. ಜಿಲ್ಲಾ ಆಯುಷ್ ಇಲಾಖೆಯ ಮಂಜೂರಾತಿಗೊಂಡ ಒಟ್ಟು 84 ಹುದ್ದೆಗಳ ಪೈಕಿ ಕೇವಲ 14 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಉಳಿದ 70 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಆಯುಷ್ ಆಸ್ಪತ್ರೆಗಳಲ್ಲಿ 15 ಚಿಕಿತ್ಸೆಗೆ ಆಗಮಿಸುವ ಸರ್ಕಾರಿ ಆರೋಗ್ಯ ಕೇಂದ್ರದ ಬಳಿಯಲ್ಲಿ ಆರಂಭವಾಗಿರುವ ಈ ಆಯುರ್ವೇದ ಆಸ್ಪತ್ರೆಯಲ್ಲಿ ದೊರಕುವ ಗುಣಮಟ್ಟದ ಆಯುರ್ವೇದ ಗುಳಿಗೆಗಳು ಮತ್ತು ಆರೋಗ್ಯ ಸೇವೆಗಳ ಬಗ್ಗೆ ಇದೂವರೆಗೂ ಜನಸಾಮಾನ್ಯರಿಗೆ ಅಷ್ಟೇನು ಮಾಹಿತಿ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಅಂದರೆ ತಪ್ಪಲ್ಲ. ಈ ಆಸ್ಪತ್ರೆಯ ಸುಧಾರಣೆ ಬಗ್ಗೆ ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ರಾಮಚಂದ್ರ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಶಾಶ್ವತವಾದ ಕಟ್ಟಡವೊಂದನ್ನು ನಿರ್ಮಿಸುವ ಸಂಬಂಧ ಈಗಾಗಲೇ ಸರ್ಕಾರದೊಂದಿಗೆ ವ್ಯವಹರಿಸಲಾಗಿದೆ. ಕುಶಾಲನಗರ ಮಾತ್ರವಲ್ಲ. ಇಡೀ ಕೊಡಗು ಜಿಲ್ಲೆಯಲ್ಲಿ 10 ಆಯುರ್ವೇದ ಆಸ್ಪತ್ರೆಗಳಿಗೆ ವೈದ್ಯರಿಲ್ಲ. ಜಿಲ್ಲಾ ಆಯುಷ್ ಇಲಾಖೆಯ ಮಂಜೂರಾತಿಗೊಂಡ ಒಟ್ಟು 84 ಹುದ್ದೆಗಳ ಪೈಕಿ ಕೇವಲ 14 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಉಳಿದ 70 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಆಯುಷ್ ಆಸ್ಪತ್ರೆಗಳಲ್ಲಿ 15 ಗ್ರೂಫ್ ಡಿ ಹುದ್ದೆಗಳು ಖಾಲಿ ಇವೆ. ಇನ್ನುಳಿದಂತೆ ನಲ್ಲೂರು, ಅರಪಟ್ಟು, ಶ್ರೀಮಂಗಲ, ಕರಿಕೆ, ಬಲ್ಲಮಾವಟಿ, ಪಾರಾಣೆ, ತೊರೆನೂರು, ಬೆಸೂರು ಮೊದಲಾದೆಡೆಗಳಲ್ಲಿ ವೈದ್ಯರಾಗಲೀ, ಸಿಬ್ವಂದಿಗಳಾಗಲೀ ಇಲ್ಲದೇ ಸಮಸ್ಯೆ ತಾಂಡವವಾಡುತ್ತಿದೆ. ಬೆಸೂರು, ಅರಪಟ್ಟು, ಬಲ್ಲಮಾವಟಿಗಳಲ್ಲಿ ವೈದ್ಯರಿದ್ದು ಸಿಬ್ವಂದಿಗಳಿಲ್ಲ. ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಇರುವ ಕೇವಲ ಐವರು ವೈದ್ಯರನ್ನು ಅಲ್ಲಲ್ಲಿ ಆಯ್ದ ಆಸ್ಪತ್ರೆಗಳಲ್ಲಿ ವಾರಕ್ಕೆ ಎರಡು ಮೂರು ಕಡೆ ಕರ್ತವ್ಯಕ್ಕೆ ಹಚ್ಚುತ್ತಿರುವುದಾಗಿ ಡಾ. ರಾಮಚಂದ್ರ ಮಾಹಿತಿ ನೀಡಿದರು. ಇನ್ನಾದರೂ ಜಿಲ್ಲೆಯ ಶಾಸಕತ್ರಯರು ಒಂದಷ್ಟು ಬಿಡುವು ಮಾಡಿಕೊಂಡು ಸರ್ಕಾರ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಜೊತೆ ವ್ಯವಹರಿಸಿ ಜಿಲ್ಲೆಯ ಆಯುಷ್ ಇಲಾಖೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ. ಹಾಗೆಯೇ ಜಿ.ಪಂ. ಅಧ್ಯಕ್ಷರೂ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಜಿಲ್ಲೆಯಲ್ಲಿ ಈಗ ಹಾಲಿ ಇರುವ ಆಯುಷ್ ಆಸ್ಪತ್ರೆಗಳಿಗೆ ಕಾಯಕಲ್ಪ ದೊರೆತರೆ ಅದೆಷ್ಟೋ ಬಡವರು ಮತ್ತು ಕೂಲಿ ಕಾರ್ಮಿಕರು ತಮ್ಮಲ್ಲಿನ ಸಣ್ಣ ಪುಟ್ಟ ರೋಗ ರುಜಿನಗಳ ನಿವಾರಣೆಗೆ ಆಯುರ್ವೇದ ಮದ್ದು ಹಾಗೂ ಔಷಧಿಗಳು ರಾಮ ಬಾಣ ವಾಗಲಿವೆ. ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳ ಔಷಧಿಗಳಿ ಗಿಂತಲೂ ಈ ಆಯುರ್ವೇದದ ಔಷಧಿಗಳು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಲಿವೆ.
- ಕೆ.ಎಸ್. ಮೂರ್ತಿ