ಗೋಣಿಕೊಪ್ಪಲು, ಡಿ.14: ಕೈಕೇರಿ ಗ್ರಾಮದಲ್ಲಿ ತಾ.15ರಂದು (ಇಂದು) ಊರೋರ್ಮೆ ನಡೆಯಲಿರುವದಾಗಿ ಮುಖ್ಯಸ್ಥ ಪಡಿಕಲ್ ಚಂಗಪ್ಪ ತಿಳಿಸಿದ್ದಾರೆ. ನೂರಾರು ವರ್ಷಗಳಿಂದ ಗ್ರಾಮಸ್ಥರಲ್ಲಿ ಸೌಹಾರ್ದ ವಾತಾವರಣ ಕಾಪಾಡುವ ನಿಟ್ಟಿನಲ್ಲಿ, ಊರಿನಲ್ಲಿ ನಿಧನರಾದವರಿಗೆ ಸಂತಾಪ ಸೂಚಿಸಲು ಊರೋರ್ಮೆ ನಡೆಸುತ್ತಾ ಬಂದಿದ್ದು, ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.