ವೀರಾಜಪೇಟೆ, ಡಿ. 13: ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ ನಾಲ್ಕು ಹೆಣ್ಣು ಮಕ್ಕಳ ವಿವಾಹ ಕಾರ್ಯ ತಾ. 15ರಂದು ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಸಭಾಂಗಣದಲ್ಲಿ ಬೆಳಿಗ್ಗೆ 12 ಗಂಟೆಗೆ ಧಾರ್ಮಿಕ ಪಂಡಿತ ಪಾಣಕ್ಕಾಡ್ ಸಯ್ಯದ್ ಶಾಹೀರ್ ಅಲಿ ಶಿಹಾಬ್ ತಂಗಳ್ ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪಿ.ಪಿ ಉಮ್ಮರ್ ಉಸ್ತಾದ್ ಕೊಯ್ಯಾಡ್, ಜಿಲ್ಲಾ ಖಾಝಿ ಎಂ.ಎಂ ಅಬ್ದುಲ್ಲಾ ಫೈಜಿ ,ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್ ,ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಮಹಮ್ಮದ್ ಕುಂಚಿ ,ಲಾಯಲ್ ವಲ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ಮೊಯ್ದಿನ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಕಾರ್ಯದರ್ಶಿ ಟಿ.ಸಿ ಸಿರಾಜ್ ,ಹೈಕೋರ್ಟ್ ವಕೀಲ ಹಿದಾಯತ್, ಆಲ್ ಇಂಡಿಯಾ ಕೆಎಂಸಿಸಿ ಅಧ್ಯಕ್ಷ ನೌಷಾದ್, ಸ್ವಿಸ್ ಗೋಲ್ಡ್ ಮ್ಯಾನೇಜಿಂಗ್ ಡೈರೆಕ್ಟರ್ ನಿಸಾರ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ .ಉಸ್ಮಾನ್ ಹಾಜಿ, ಪ್ರಮುಖರಾದ ಮುಸ್ತಾಫ ಹಾಜಿ ಮಂದೂರ್, ಬೆಂಗಳೂರಿನ ಅಶ್ರಫ್, ಮೂಸ ಉಸ್ತಾದ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ತಿಳಿಸಿದ್ದಾರೆ.