ಮಡಿಕೇರಿ, ಡಿ. 13: ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಇಂದು ಇಲ್ಲಿನ ಸಂತ ಮೈಕಲ್ಲರ ವಾಣಿಜ್ಯ ಸಂಕೀರ್ಣದಲ್ಲಿ ನೆರವೇರಿತು. ವಲಯದ ಶ್ರೇಷ್ಠ ಗುರು ಫಾ. ರಾಯಪ್ಪ ಉದ್ಘಾಟಿಸಿದರು. ಈ ಸಂದರ್ಭ ಕೊಡಗು ವಲಯ ಶ್ರೇಷ್ಠ ಗುರು ಫಾ. ಮದಲೈ ಮುತ್ತು, ಮಡಿಕೇರಿ ಸಂತ ಮೈಕಲರ ಚರ್ಚ್ನ ಧರ್ಮಗುರು ಫಾ. ಆಲ್ಫ್ರೆಡ್ ಮೆಂಡೋನ್ಸಾ, ಸಂತ ಮೈಕಲರ ಶಾಲೆಯ ಸಂಚಾಲಕ ಫಾ. ನವಿನ್ ಕುಮಾರ್, ಸಿಎಸ್ಐ ಶಾಂತಿ ಚರ್ಚ್ನ ಫಾ. ಅಮ್ರತ್ ರಾಜ್ ಖೋಡೆ, ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್, ಉಪಾಧ್ಯಕ್ಷ ಎನ್.ಟಿ. ಜೋಸೆಫ್, ಎಸ್.ಎಂ. ಡಿಸಿಲ್ವ, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಹಾಜರಿದ್ದರು.
ನಿರ್ದೇಶಕ ಸಾರ್ಜೆಂಟ್ ಇಮ್ಯಾನ್ವೆಲ್ ಸ್ವಾಗತಿಸಿದರೆ; ನಿರ್ದೇಶಕ ಸಲ್ಡಾನ ವಂದನಾರ್ಪಣೆ ಯನ್ನು ನೆರವೇರಿಸಿದರು.