ಕುಶಾಲನಗರ, ಡಿ. 13: ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಹಿಂದೂ ಧರ್ಮ ಜಾಗೃತಿ ಸಭೆ ಡಿ.15 ರಂದು ಕುಶಾಲನಗರದಲ್ಲಿ ನಡೆಯಲಿದೆ.

ಸಂಜೆ 4 ಗಂಟೆಗೆ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಲಿದ್ದು ಜನಜಾಗೃತಿ ಸಮಿತಿಯ ಪ್ರಮುಖರಾದ ಮೈಸೂರಿನ ಶಿವರಾಂ, ಮಡಿಕೇರಿಯ ನ್ಯಾಯವಾದಿ ಕೃಷ್ಣಮೂರ್ತಿ, ಕುಶಾಲನಗರ ದೀಪಾ ತಿಲಕ್ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.