ಕುಶಾಲನಗರ, ಡಿ. 13: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಮಂಡಲಪೂಜೆ ತಾ. 16 ರಂದು ನಡೆಯಲಿದೆ. ಮಂಡಲಪೂಜೆಯ ಅಂಗವಾಗಿ ಇಂದಿನಿಂದ (ಡಿ.14 ರಿಂದ) 3 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ತಾ. 14 ರಂದು ಬೆಳಗ್ಗೆ ಗಣಪತಿ ಹೋಮ ನಂತರ ಧ್ವಜಾರೋಹಣ, ಸಂಜೆ 7 ಗಂಟೆಗೆ ಉಯ್ಯಾಲೋತ್ಸವ, ತಾ. 15 ರಂದು ಬೆಳಗ್ಗೆ 8 ಗಂಟೆಗೆ ನವಗ್ರಹ ಹೋಮ, ಸಂಜೆ 7 ಗಂಟೆಗೆ ಉಯ್ಯಾಲೋತ್ಸವ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ.
ತಾ. 16 ರಂದು ಬೆಳಗ್ಗೆ 9 ಗಂಟೆಯಿಂದ ಅಯ್ಯಪ್ಪಸ್ವಾಮಿ ಮಂಡಲಪೂಜೋತ್ಸವ ನಡೆಯಲಿದ್ದು ನಂತರ ಅಭಿಷೇಕ ಪೂಜೆ, ಕಳಸ ಪೂಜೆ, ನೈವೇದ್ಯ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಪಾಲ್ಕೊಂಬು ತರುವುದು, ಸಂಜೆ 6 ಗಂಟೆಗೆ ಚಂಡೆವಾದ್ಯ ಭವ್ಯ ದೀಪಾಲಂಕೃತ ಮಂಟಪದಲ್ಲಿ ಸ್ವಾಮಿ ಮೆರವಣಿಗೆ ನಡೆಯಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಾಲಯಕ್ಕೆ ವಾಪಾಸ್ ಬಂದು ರಾತ್ರಿ 8 ಗಂಟೆಯ ನಂತರ ಭಜನಾ ಕಾರ್ಯಕ್ರಮ ಬೆಳಗಿನ ಜಾವ 3 ಗಂಟೆಗೆ ಅಗ್ನಿಕೊಂಡ ಪ್ರವೇಶ ಕಾರ್ಯಕ್ರಮದೊಂದಿಗೆ ಮಂಡಲಪೂಜೆಗೆ ತೆರೆ ಬೀಳಲಿದೆ.