ಮಡಿಕೇರಿ, ಡಿ. 9: ಇಲ್ಲಿನ ಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿಗಣಪತಿ ದೇವಾಲಯದಲ್ಲಿ ತಾ.11ರಂದು ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವದು. ಅಂದು ಸಂಜೆ 7.35ಕ್ಕೆ ನೆರೆಕಟ್ಟುವದು, 8.30ಕ್ಕೆ ಕದಿರು ತೆಗೆಯುವದು, 9.30ಕ್ಕೆ ಕದಿರು ಹಾಗೂ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದ್ದಾರೆ.