ಮಡಿಕೇರಿ, ಡಿ.9: ಉಪ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಕೊಡಗು ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಜಯೋತ್ಸವ ನಡೆಯಿತು.
ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜನತೆ ನಮಗೆ ಬೆಂಬಲ ನೀಡಿದ್ದಾರೆ. ಅದನ್ನು ಉಳಿಸಿ ಕೊಂಡು ಹೋಗುವ ಪ್ರಯತ್ನವನ್ನು ಮಾಡುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಗಳನ್ನು ಮತದಾರರು ಮೆಚ್ಚಿದ್ದಾರೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಬಿಜೆಪಿಯ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಈ ಬಾರಿ ಜನರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇನ್ನು 3 ವರ್ಷಗಳ ಕಾಲ ಜನಪರ ಆಡಳಿತವನ್ನು ಬಜೆಪಿ ಸರ್ಕಾರ ನೀಡಲಿದೆ ಎಂದರು.
ಬಿಜೆಪಿ ಮಹಿಳಾ ಘಟಕದ ನಗರಾಧ್ಯಕ್ಷ ಅನಿತಾ ಪೂವಯ್ಯ, ನಗರಸಭಾ ಮಾಜಿ ಸದಸ್ಯರಾದ ಕೆ.ಎಸ್. ರಮೇಶ್, ಉಣ್ಣಿಕೃಷ್ಣ, ಪ್ರಕಾಶ್, ಲಕ್ಷ್ಮಿ, ಪ್ರಮುಖರಾದ ಜಗದೀಶ್, ರಾಜೇಶ್, ಮನು, ಮಂಜುನಾಥ್ ಹಾಜರಿದ್ದರು.
ಸುಂಟಿಕೊಪ್ಪ : ಸುಂಟಿಕೊಪ್ಪ ನಗರ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯಕರ್ತರು ಕನ್ನಡ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಗೆಲುವಿನಿಂದ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಸಹಕಾರಿ ಯಾಗಲಿದೆ ಎಂದು ನಗರ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಹರ್ಷ ವ್ಯಕ್ತಪಡಿಸಿದರು.
Pಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಕಾರ್ಯದರ್ಶಿ ಬಿ.ಕೆ.ಪ್ರಶಾಂತ್, ಗ್ರಾ.ಪಂ.ಸದಸ್ಯರಾದ ಸಿ.ಚಂದ್ರ, ಯುವಮೋರ್ಚ ಅಧ್ಯಕ್ಷ ರಂಜಿತ್, ಪಟ್ಟೆಮನೆ ಉದಯಕುಮಾರ್, ಓಡಿಯಪ್ಪನ ಸುಧೀಶ್, ಬಿ.ಎಸ್.ಆಶೋಕ್ ಶೇಟ್, ಸಿ.ಸಿ.ಸುನಿಲ್‍ಕುಮಾರ್ ಹಾಗೂ ಆಶೋಕ್ ಮತ್ತಿತರರು ಇದ್ದರು.
ಗೋಣಿಕೊಪ್ಪಲು: ಕರ್ನಾಟಕ ರಾಜ್ಯದ ವಿವಿಧೆಡೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು 12 ಸ್ಥಾನವನ್ನು ಗೆದ್ದ ಹಿನೆÀ್ನಲೆಯಲ್ಲಿ ಗೋಣಿಕೊಪ್ಪಲುವಿನ ಬಸ್ ನಿಲ್ದಾಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಜಿ.ಪಂ. ಸದಸ್ಯ ಸಿ.ಕೆ.ಬೋಪಣ್ಣ ಮುಂದಾಳತ್ವದಲ್ಲಿ ಸಭೆ ಸೇರಿ ವಿಜಯೋತ್ಸವ ಆಚರಿಸಿದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಯುವಕರು ಸಿಹಿ ವಿತರಿಸಿದರು. ಮಾದ್ಯಮದೊಂದಿಗೆ ಮಾತನಾಡಿದ ಸಿ.ಕೆ.ಬೋಪಣ್ಣ ರಾಜ್ಯ ಬಿಜೆಪಿ ಸರ್ಕಾರ ಇನ್ನು ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಡ ಜನತೆಯ ಪರವಾಗಿ ಕೆಲಸ ಮಾಡಲಿದೆ ಎಂದರು. ವಿಜಯೋತ್ಸವದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಜಪ್ಪು ಸುಬ್ಬಯ್ಯ, ಮಹಮ್ಮದ್ ಚರ್ದು, ನವೀನ್ ಪೂಜಾರಿ, ತಾ.ಪಂ.ಸದಸ್ಯ ಜಯಪೂವಯ್ಯ, ವೀರಾಜಪೇಟೆಯ ಜೋಕೀಂ, ಮುಂತಾದವರು ಹಾಜರಿದ್ದರು.
ಕರಿಕೆ: ಹದಿನೈದು ವಿಧಾನಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಹನ್ನೆರಡರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನೆÀ್ನಲೆಯಲ್ಲಿ ಕರಿಕೆ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಚೆತ್ತುಕಾಯದಿಂದ ಗಡಿಭಾಗ ಚೆಂಬೇರಿತನಕ ವಾಹನದಲ್ಲಿ ಮೆರವಣಿಗೆ ಸಾಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್, ಯುವಮೋರ್ಚಾ ಅಧÀ್ಯಕ್ಷ ನಿಡ್ಯಮಲೆ ನಂದ, ಪ್ರಮುಖರಾದ ವಿಜಯ, ಐಸಾಕ್, ಜಯಂತ, ರಮೇಶ್ ಸೇರಿದಂತೆ ಇತರ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗುಡ್ಡೆಹೊಸೂರು: ಉಪ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷ ಭರ್ಜರಿ ಜಯಬೇರಿ ಭಾರಿಸಿದ ಹಿನೆÀ್ನಲೆಯಲ್ಲಿ ಗುಡ್ಡೆಹೊಸೂರು ವೃತ್ತದ ಬಳಿ ಬಿ.ಜೆ.ಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಕ್ಷದ ಪರ ಮತ್ತು ಮೋದಿಪರ ಘೋಷಣೆ ಕೂಗಿದರು. ಪಕ್ಷದ ಮುಖಂಡ ಎಂ.ಆರ್.ಉತ್ತಪ್ಪ, ಮುಳ್ಳುಸೋಗೆ ಮಹೇಂದ್ರ, ಗ್ರಾ.ಪಂ. ಸದಸ್ಯೆ ಕವಿತಾ, ರಾಜಪ್ಪ, ಬೂತ್ ಅಧ್ಯಕ್ಷ ಕೆ.ಆರ್. ನಿತ್ಯಾನಂದ, ಕುಶಾಲಪ್ಪ, ಕೆ.ಡಿ.ಗಿರೀಶ್, ಜಿ.ಎಂ.ವಿಶುಕುಮಾರ್, ಬಿ.ಎಸ್.ಧನಪಾಲ್ ಮೊಣ್ಣಪ್ಪ, ಕೆ.ಕೆ.ಗಣೇಶ್, ಕುಡೆಕಲ್ ಕುಶಾಲಪ್ಪ, ಸುಧೀಶ್, ರಂಜಯ್ ಮುಂತಾದವರು ಹಾಜರಿದ್ದರು.
ಚೆಟ್ಟಳ್ಳಿ: ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಭರ್ಜರಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಚೆಟ್ಟಳ್ಳಿ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ, ಜಿಲ್ಲಾ ಸ್ತ್ರೀ ಶಕ್ತಿ ಘಟಕದ
ಅಧ್ಯಕ್ಷೆ ಮೇರಿ ಅಂಬುದಾಸ್ ವಿಜಯೋತ್ಸವ ಬಗ್ಗೆ ಮಾತನಾಡಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಕುಶಾಲನಗರ: ವಿಧಾನಸಭಾ ಉಪ ಸಮರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಣೆ ನಡೆಯಿತು.
ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಪಕ್ಷದ ಪ್ರಮುಖರು, ಕಾರ್ಯಕರ್ತರು ಬಿಜೆಪಿ ಪಕ್ಷ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಜಯಕಾರ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಜಿ.ಮನು, ಈ ಹಿಂದಿನ ಸಮ್ಮಿಶ್ರ ಸರಕಾರದ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನತೆ ಮುಂದಿನ ಅವಧಿಗಳ ಕಾಲ ಉತ್ತಮ ಆಡಳಿತ ಬಯಸಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜು ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಉಂಟಾದ ಅಸ್ಥಿರತೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಜೆಡಿಎಸ್ ಸರಕಾರ ರಚಿಸಿತ್ತು. ಈ ಸರಕಾರಕ್ಕೆ ರಾಜೀನಾಮೆ ನೀಡಿ ಹೊರಬಂದ 15 ಶಾಸಕರ ರಾಜೀನಾಮೆ ಅಂಗೀಕರಿಸದೆ ಸತಾಯಿಸಿ ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಅವರ ಸಂಗಡಿಗರಿಗೆ ಇಂದು ಸರಿಯಾದ ಉತ್ತರ ನೀಡಲಾಗಿದೆ. ಇಂದಿನ ಉಪಸಮರ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದೆ ಎಂದರು.
ಇದೇ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಿಜಯೋತ್ಸವದಲ್ಲಿ ಬಿಜೆಪಿ ಮುಖಂಡರಾದ ಚಿಲ್ಲನ ಗಣಿಪ್ರಸಾದ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಶಿವಾಜಿ, ವೈಶಾಖ್, ಚರಣ್, ಎಚ್.ಎನ್. ರಾಮಚಂದ್ರ, ವರದ, ಜನಪ್ರತಿನಿಧಿಗಳಾದ ವೇದಾವತಿ ಮತ್ತಿತರರು ಇದ್ದರು.