ಮಡಿಕೇರಿ, ಡಿ. 9: ನಾಪೋಕ್ಲು ಪೊಲೀಸ್ ಠಾಣೆಯ ಬಳಿ ಇರುವ ಪಾಳು ಬಿದ್ದ ಸರಕಾರಿ ಕಟ್ಟಡವೊಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಾದಕ ವಸ್ತು ವ್ಯಸನಿಗಳು ಈ ಕಟ್ಟಡವನ್ನು ತಮ್ಮ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಬಗ್ಗೆ ನಾಪೋಕ್ಲುವಿನ ಮನ್ಸೂರ್ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.