ಸಿದ್ದಾಪುರ, ಡಿ. 8 : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ, ತಾ. 11ರ ಬುಧವಾರ ದಂದು ಸಾಮೂಹಿಕ ಹುತ್ತರಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ.

ಹುತ್ತರಿ ಹಬ್ಬದ ಪ್ರಯುಕ್ತ ಸಂಜೆ 7 ಗಂಟೆಗೆ ಮುತ್ತಪ್ಪ ವೆಳ್ಳಾಟಂ, 7:35 ಕ್ಕೆ ನೆರೆಕಟ್ಟುವದು, ದೇವಸ್ಥಾನದ ಗದ್ದೆಯಿಂದ ರಾತ್ರಿ 8:35 ಕ್ಕೆ ಕದಿರು ತೆಗೆಯುವದು, 9:35 ಕ್ಕೆ ಪ್ರಸಾದ ವಿತರಣೆ ನಂತರ ಸಾಮೂಹಿಕ ಭೋಜನ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತಮಂಡಳಿ ತಿಳಿಸಿದೆ.

* ಮಡಿಕೇರಿ ನಗರ ಗೌಡ ನಾಗರಿಕರ ಹುತ್ತರಿ ಸಮಿತಿ ವತಿಯಿಂದ ತಾ. 11ರಂದು ರಾತ್ರಿ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಹುತ್ತರಿ ಹಬ್ಬ ಆಚರಣೆ ನಡೆಯಲಿದೆ.

ಆ ದಿನ ರಾತ್ರಿ 7.35 ಗಂಟೆಗೆ ನೆರೆಕಟ್ಟುವದು, 8.35 ಗಂಟೆಗೆ ಕದಿರು ಕುಯ್ಯುವದು ಮತ್ತು 9.35 ಗಂಟೆಗೆ ಕದಿರನ್ನು ವಿತರಿಸಲಾಗುವದು ಎಂದು ಮಡಿಕೇರಿ ನಗರ ಗೌಡ ನಾಗರಿಕ ಹುತ್ತರಿ ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ ತಿಳಿಸಿದ್ದಾರೆ.

ಗೋಣಿಕೊಪ್ಪ ವರದಿ: ಇಗ್ಗುತ್ತಪ್ಪ ಕೊಡವ ಸಂಘದಿಂದ ಹುತ್ತರಿ ಕದಿರು ತೆಗೆಯುವ ಕಾರ್ಯಕ್ರಮ ತಾ. 11 ರಂದು ರಾತ್ರಿ 8.30 ಗಂಟೆಗೆ ಪರಿಮಳ ಮಂಗಳ ವಿಹಾರ ಸಮೀಪವಿರುವ ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಮನೆಯಪಂಡ ದೇವಯ್ಯ ಅವರ ಗದ್ದೆಯಲ್ಲಿ ನಡೆಯಲಿದೆ ಎಂದು ಇಗ್ಗುತ್ತಪ್ಪ ಕೊಡವ ಸಂಘ ಪ್ರಕಟಣೆ ತಿಳಿಸಿದೆ.

ಸಿ.ಎನ್.ಸಿ.ಯಿಂದ ಹುತ್ತರಿ

ಸಿ.ಎನ್.ಸಿ. ಸಂಘಟನೆಯಿಂದ ತಾ. 11ರಂದು ಹಗಲು 10.30 ಗಂಟೆಗೆ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪ ಅವರ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಹುತ್ತರಿ ಆಚರಿಸಲಾಗುವದು ಎಂದು ಸಂಘಟನೆ ಪ್ರಮುಖ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಈ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.