ಶನಿವಾರಸಂತೆ, ಡಿ. 8: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಮಾಸಿಕ ಸಭೆ ಲಯನ್ಸ್ ಕಚೇರಿಯಲ್ಲಿ ಅಧ್ಯಕ್ಷ ಲಯನ್ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಡಿಸೆಂಬರ್ ತಿಂಗಳನ್ನು ರಿಟಿನ್‍ಶನ್ ಜಿಲ್ಲಾ ತಿಂಗಳೆಂದು ಆಚರಣೆ ಮಾಡುವ ಮೂಲಕ ಕ್ಲಬ್‍ಗೆ ಹೆಚ್ಚಿನ ಪಾಯಿಂಟ್‍ಗಳನ್ನು ಗಳಿಸಲು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಕ್ಲಬ್ ಉಪಾಧ್ಯಕ್ಷ ಜಿ. ನಾರಾಯಣಸ್ವಾಮಿ, ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಬಿ.ಪಿ. ಪುಟ್ಟಪ್ಪ ಧ್ವಜವಂದನೆ ಮಾಡಿದರು. ಜಿ. ನಾರಾಯಣ ಸ್ವಾಮಿ ವಂದಿಸಿದರು.