ಮಡಿಕೇರಿ, ಡಿ. 8: ಭಾರತ ಸರ್ಕಾರ ಬುಡಕಟ್ಟು ಮಂತ್ರಾಲಯ, ನವದೆಹಲಿ ಇವರ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಕರ್ನಾಟಕ ಸರ್ಕಾರದ ಅಡಿಯಲ್ಲಿ ನವೆಂಬರ್ 23 ರಂದು ಅಂತರ್ ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಹ್ಯಾಂಡ್‍ಬಾಲ್, ಫುಟ್‍ಬಾಲ್ ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿ ಮಧ್ಯಪ್ರದೇಶದ ಬೋಪಾಲ್‍ನಲ್ಲಿ ನಡೆಯುವ ಏಕಲವ್ಯ ಶಾಲೆಗಳ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.