ಸುಂಟಿಕೊಪ್ಪ, ಡಿ.8: ವಿದ್ಯಾರ್ಥಿಗಳಲ್ಲಿ ಇಂಧನ ಪ್ರಾಮುಖ್ಯತೆ ಮತ್ತು ಇಂಧನವನ್ನು ಉಳಿಸುವ ಅರಿವನ್ನು ಮೂಡಿಸಲು ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಯಿತು.

ಕೋಕೋ ನೆಟ್‍ಲಡ್ಡು ಫ್ರೂಟ್‍ಸ ಲಾಡ್ ಕೊಕೊನೆಟ್‍ಕೇಕ್ ಸ್ಯಾಂಡ್ ವಿಜ್, ಚುರುಮುರಿ,ಪಪ್ಪಾಯಿ ರಸೋಯಿಯನ್ನು ವಿದ್ಯಾರ್ಥಿಗಳು ಬೆಂಕಿ ರಹಿತವಾಗಿ ತಯಾರಿಸಿದರು.

ಮಾರ್ಗದರ್ಶಿ ಉಪನ್ಯಾಸಕಿ ಕಾವ್ಯ ಮಾತನಾಡಿ ನಾವು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಇಂಧನ ಸಮಸ್ಯೆಯೂ ಒಂದಾಗಿದೆ. ಇಂಧನ ಪ್ರಾಮುಖ್ಯತೆ ಮತ್ತು ಮಿತವಾಗಿ ಬಳಸುವದು ಉಳಿಸುವದು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯತೆ ಇದೆ. ಆದುದರಿಂದ ಇಂದನ ರಹಿತಿ ಅಡುಗೆ ಸ್ಪರ್ಧೆ ಯನ್ನು ಏರ್ಪಡಿಸಿದ್ದೇವೆ ಎಂದು ಹೇಳಿದರು.

ಇಂಧನ ಅಪವ್ಯಯತೆ ಇಂಧನ ಸಮಸ್ಯೆಗಳ ಬಗ್ಗೆ ಪ್ರಾಚಾರ್ಯರಾದ ಪಿ.ಎಸ್. ಜಾನ್ ಮುಂದಿನ ದಿನ ಗಳಲ್ಲಿ ಕಾಲೇಜಿನಲ್ಲಿ ಇಂಧನ ಉಳಿತಾಯದ ಬಗ್ಗೆ ಹತ್ತು ಹಲವು ಪರ್ಯಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದೆಂದರು.