ಸೋಮವಾರಪೇಟೆ,ಡಿ.8: ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 63ನೇ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.

ಕೊಡ್ಲಿಪೇಟೆಯ ಬಸ್ ನಿಲ್ದಾಣ ಸಮೀಪದಲ್ಲಿ, ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ, ವಿವಿಧ ಸಂಘಟನೆಗಳಿಂದ ಪರಿನಿರ್ವಾಣ ದಿನಾಚರಣೆ ನಡೆಯಿತು. ಸಂಜೆ ಮೊಂಬತ್ತಿ ಯೊಂದಿಗೆ ಮಾನವ ಸರಪಳಿ ರಚಿಸಿ ಅಂಬೇಡ್ಕರ್ ಅವರ ಸೇವೆಯನ್ನು ಸ್ಮರಿಸಲಾಯಿತು.

ಈ ಸಂದರ್ಭ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಜನಾರ್ಧನ್, ಹೋಬಳಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಮಣ್ಣ, ಪ್ರಮುಖರಾದ ಜಗದೀಶ್, ವಸಂತ್, ಇಂದ್ರೇಶ್, ಕಾರ್ತಿಕ್, ಪ್ರಸನ್ನ, ಹೊನ್ನಮ್ಮ, ವೀರಭದ್ರ, ಹೇಮಂತ್, ವಿನಯ್ ಸೇರಿದಂತೆ ಇತರರು ಹಾಜರಿದ್ದರು.