ಸೋಮವಾರಪೇಟೆ, ಡಿ. 8: ಆರೋಗ್ಯದಿಂದ ಕೂಡಿದ ಹಿಂದೂ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂಬ ಮದ್ದನ್ನು ನೀಡಿದವರು ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ಎಂದು ರಾ.ಸ್ವ.ಸೇ. ಸಂಘದ ಮಂಗಳೂರು ವಿಭಾಗದ ಪ್ರಮುಖ್ ಆನೆಗುಡ್ಡೆದ ವಾದಿರಾಜ್ ಅಭಿಪ್ರಾಯಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಏಕತ್ರಿಕರಣ ಸಾಂಘಿಕ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು, ಮಾತನಾಡಿದರು.
ರಾ.ಸ್ವ.ಸೇ. ಶಾಖೆಯಲ್ಲಿ ಪ್ರತಿನಿತ್ಯ 1 ಗಂಟೆಗಳ ಕಾಲ ನಿಶ್ಚಿತವಾದ ಕಾರ್ಯಗಳೊಂದಿಗೆ ಹಿಂದೂ ರಾಷ್ಟ್ರದ ಬಲಿಷ್ಠತೆಗಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಚಿಂತನೆಗಳನ್ನು ಮನನ ಮಾಡುವ ಕಾರ್ಯವಾಗಿವೆ. ಆದರೆ ಶಾಖೆ ಎಂಬದು ಸ್ವಯಂ ಸೇವಕರ ಸ್ವತ್ತಲ್ಲ, ಅದು ಇಡೀ ಹಿಂದೂ ಸಮಾಜದ ಆಸ್ತಿಯಾಗಿದೆ ಎಂದರು. ಮುಂದಿನ ಡಿ.15ರಂದು ದೇಶಾದ್ಯಂತ ದಂಡ ಪ್ರಹರ್ ಯಜ್ಞ ನಡೆಯಲಿದ್ದು, ಸ್ವಯಂ ಸೇವಕರು ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಬೇಕೆಂದು ಮನವಿ ಮಾಡಿದರು.
ಸಾಂಘಿಕ್ನಲ್ಲಿ ತಾಲೂಕಿನ ಸುಮಾರು 30 ಗ್ರಾಮ ಶಾಖೆಗಳು 24 ಭಗವಾಧ್ವಜಗಳಡಿಯಲ್ಲಿ ಸುಮಾರು 272 ಸ್ವಯಂ ಸೇವಕರು ಪಾಲ್ಗೊಂಡರು. ಸಾಂಘೀಕ್ನಲ್ಲಿ ರಾ.ಸ್ವ.ಸೇವಕ ಸಂಘದ ತಾಲೂಕು ಕಾರ್ಯವಾಹ ಶಶಿಕಾಂತ್, ಪ್ರಚಾರಕ್ ಭರತ್, ಕೆ.ಎಸ್. ಪಧ್ಮನಾಭ, ದರ್ಶನ್ ಜೋಯಪ್ಪ, ಎಚ್.ಎನ್. ದಾಮೋಧರ್, ಮಹೇಶ್, ತಿಮ್ಮಯ್ಯ, ಉಮೇಶ್ ಸೇರಿದಂತೆ ಹಲವರು ಸಂಘ ಪ್ರಮುಖರು ಪಾಲ್ಗೊಂಡಿದ್ದರು.