*ಗೋಣಿಕೊಪ್ಪಲು, ಡಿ. 8 : ರೂ. 15 ಲಕ್ಷ ವೆಚ್ಚದಲ್ಲಿ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದ ಹಾಡಿ ಗಿರಿಜನ ಕಾಲೋನಿಯ ಸಂಪರ್ಕ ರಸ್ತೆ ಅಭಿವೃದ್ದಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಬುಡಕಟ್ಟು ಸಮುದಾಯದ ಅಭಿವೃದ್ದಿ ನಮ್ಮ ಕನಸ್ಸಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ವನ್ನು ಪಡೆದು ಕಾಲೋನಿಗಳ ಅಭಿವೃದ್ಧಿಪಡಿಸಲಾಗುವದು. ಈ ನಿಟ್ಟಿನಲ್ಲಿ ಬೆಟ್ಟದ ಹಾಡಿ ಗಿರಿಜನ ಕಾಲೋನಿಯ ರಸ್ತೆ ಅಭಿವೃದ್ದಿಗೆ 15 ಲಕ್ಷ ಅನುದಾನವನ್ನು ಒದಗಿಸಿಕೊಡಲಾಗಿದೆ ಎಂದು ಹೇಳಿದರು.
ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕುಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಮುಕ್ಕಾಟಿರ ನವೀನ್ ಅಪ್ಪಯ್ಯ, ತಾಲೂಕು ಸಮಿತಿ ಸದಸ್ಯ ಚೋಡುಮಾಡ ದಿನೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊಟ್ಟೆಂಗಡ ರಮೇಶ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಸಾಮಾಜಿಕ ಜಾಲತಾಣ ಸಂಚಾಲಕ ಚಿರಿಯಪಂಡ ಸಚಿನ್ ಪೆಮ್ಮಯ್ಯ, ಪ್ರಮುಖರಾದ ಕಾಕೇರ ಸುರೇಶ್, ಮುಂಡುಮಾಡ ಕರುಂಬಯ್ಯ, ನೂರೇರ ಮನೋಜ್, ಪೆಮ್ಮಣಮಾಡ ರಮೇಶ್, ಚಟ್ಟಮಾಡ ಅನಿಲ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಗ್ರಾಮಸ್ಥರು, ಕಾರ್ಯಕರ್ತರು ಹಾಜರಿದ್ದರು.