ಸುಂಟಿಕೊಪ್ಪ, ಡಿ. 7: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಹಾಗೂ ಚೆÀಸ್ಕಾಂ ಇಲಾಖೆಯ ಲೈನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿದ ಎಂ.ಎಂ. ಶಿವಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.
ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚಾಯಿತಿ ವತಿಯಿಂದ 5 ವರ್ಷಗಳ ಕಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಿ.ಸಿ. ನಂದೀಶ್ಕುಮಾರ್ ಮತ್ತು ಚೆಸ್ಕಾಂ ಇಲಾಖೆಯಲ್ಲಿ 19 ವರ್ಷ ಕಾರ್ಯನಿರ್ವಹಿಸಿ ಮೇಲ್ದರ್ಜೆ ಮೆಕಾನಿಕ್ ಹುದ್ದೆಗೆ ಆಯ್ಕೆಯಾದ ಎಂ.ಎಂ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಉಸ್ಮಾನ್, ಸಲೀಂ, ಜಯಲಕ್ಷ್ಮಿ, ಶಾಲಿನಿ, ನಂಜಪ್ಪ, ಅಧಿಕಾರಿ ಎಂ. ಗಿರೀಶ್, ಕಾರ್ಯದರ್ಶಿ ಪಿ.ಕೆ. ಸುಕುಮಾರ್, ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.