ನಾಪೆÇೀಕ್ಲು, ಡಿ. 7: ಸಮೀಪದ ಎಮ್ಮೆಮಾಡು ಗ್ರಾಮಪಂಚಾಯಿತಿ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಕೊಡೆ, ಬ್ಯಾಗ್, ಸ್ಟೀಲ್ ವಾಟರ್‍ಬಾಟಲ್, ಹಾಗೂ ನೋಟ್ ಪುಸ್ತಕಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೂಟ್ ಆಲಿ ವಿತರಿಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯ ಮಾಯಿನೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೀಣಾಕುಮಾರಿ ಇದ್ದರು. ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆ, ಪಡಿಯಾಣಿಯ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಪೆÇೀಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.