ವೀರಾಜಪೇಟೆ, ಡಿ.7: ಮಳೆ ಹಾನಿ ಪರಿಹಾರ ಪಡೆಯಲು ಸಂತ್ರಸ್ತರ ಹೆಸರಿನಲ್ಲಿ ಯಾವದೇ ದಾಖಲೆಗಳಿಲ್ಲದಿದ್ದರೂ ವಾಸ ದೃಢೀಕರಣ ಪತ್ರವನ್ನು ಹಾಜರುಪಡಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ವಾಸ ದೃಢೀಕರಣ ಪತ್ರ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿಯಿಂದ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ನಡೆದ ಕಾಮಗಾರಿ ಭೂಮಿ ಪೂಜೆಯ ಸಂದರ್ಭದಲ್ಲಿ
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಂ.ಪರಮೇಶ್ ಅವರು ಸಂತ್ರಸ್ತರಿಗೆ ಆಸ್ತಿಯ ಮೂಲ ದಾಖಲೆಯ ನಕಲು ನೀಡದಿದ್ದರೆ ಮಳೆ ಹಾನಿ ಪರಿಹಾರ ಕೊಡುವದಿಲ್ಲ ಎಂದು ಪರಿಹಾರದ ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಮಂದಿ ನೈಜ ಸಂತ್ರಸ್ತರು ಬೀದಿ ಪಾಲಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದಾಗ ಶಾಸಕ ಬೋಪಯ್ಯ ಅವರು ಸಂತ್ರಸ್ತರು ವಾಸ ದೃಢೀಕರಣ ಸಲ್ಲಿಸಿದರೆ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಅದರಂತೆ ಅನೇಕ ಸಂತ್ರಸ್ತರು ಪರಿಹಾರ ಪಡೆದಿದ್ದಾರೆ ಎಂದು ಪ್ರತಿಕ್ರಿಯಿಸಿದರು.