ಮಡಿಕೇರಿ, ಡಿ. 5: ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ, ಮನಸ್ವಿನಿ, ಮೈತ್ರಿ, ಇತ್ಯಾದಿ ಯೋಜನೆಗಳಡಿ ಪಿಂಚಣಿ ನೋಂದಾಯಿಸಿಕೊಂಡ ಫಲಾನು ಭವಿಗಳಿಗೆ ಸುಲಭ ಹಾಗೂ ಯಾವದೇ ಅಡಚಣೆಯಿಲ್ಲದೇ ಪಿಂಚಣಿ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವಾಂಕಾಂಕ್ಷೆಯ ಕ್ರಮ ಕೈಗೊಂಡಿದ್ದು, ಈ ಸಂಬಂಧ ಪಿಂಚಣಿದಾರರು ತುರ್ತಾಗಿ ತಮ್ಮ ಪಿಂಚಣಿಗೆ ಸಂಬಂಧಿಸಿದ ಪಿಪಿಒ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರರ ಚೀಟಿ, ಪಡಿತರ ಚೀಟಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಕಲನ್ನು ತಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಗಳಿಗೆ, ಕಂದಾಯ ಪರಿವೀಕ್ಷಕರಿಗೆ ತುರ್ತಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.