ಮಡಿಕೇರಿ, ಡಿ. 4: ಭಾರತೀಯ ನೌಕಾದಳದಲ್ಲಿ ಸರ್ಜನ್ ಕ್ಯಾಪ್ಟನ್ ಆಗಿರುವ ಕೊಡಗಿನ ಮಂಡೇಪಂಡ ಡೆಂಪ್ಸಿ ಚಂಗಪ್ಪ ಅವರಿಗೆ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಪ್ ಅವರ ಕಮೆಂಡೇಶನ್ ಮೆಡಲ್ ದೊರೆತಿದೆ. ದೇಶದ ರಕ್ಷಣಾ ಪಡೆಯ ಒಂದು ವಿಭಾಗವಾಗಿರುವ ನೌಕಾ ಪಡೆಯ ದಿನವಾದ ಇಂದು ಅವರಿಗೆ ಈ ಮೆಡಲ್ ಅನ್ನು ಪ್ರದಾನ ಮಾಡಲಾಯಿತು. ಡೆಂಪ್ಸಿ ಚಂಗಪ್ಪ ಅವರು ಮಂಡೇಪಂಡ ದಿ. ಕರ್ನಲ್ ಮಂದಣ್ಣ (ರಾಜು) ಅವರ ಪುತ್ರ. ಇದು ಅವರಿಗೆ ಮೂರನೇ ಬಾರಿಗೆ ದೊರೆತಿರುವ ಕಮೆಂಡೇಶನ್ ಮೆಡಲ್ ಆಗಿದೆ.