ಮಡಿಕೇರಿ, ಡಿ. 5: ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮುಂಬರುವ ಏಪ್ರಿಲ್ ತಿಂಗಳಲ್ಲಿ ಗೌಡ ಮಹಿಳಾ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಇಂದು ವಿವಿಧ ಗೌಡ ಸಮಾಜಗಳು, ಸಂಘಟನೆಗಳ ಪ್ರಮುಖರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕೊಡಗು ಗೌಡ ಮಹಿಳಾ ಒಕ್ಕೂಟದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತ ನಾಡಿದ ಒಕ್ಕೂಟದ ಕಾರ್ಯದರ್ಶಿ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಒಕ್ಕೂಟ ರಚನೆಯಾಗಿ 23 ವರ್ಷಗಳು ಸಂದಿದ್ದು, 2 ಸಾವಿರ ಮಂದಿ ಸದಸ್ಯರುಗಳಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ಮಹಿಳೆಯರ ಸಂಘಟನೆಗಾಗಿ ಹಮ್ಮಿಕೊಂಡು ಬಂದಿದ್ದು, ಇದೀಗ ಮಹಿಳಾ ಸಮಾವೇಶ ನಡೆಸಲು ಚಿಂತನೆ ಹರಿಸ ಲಾಗಿದೆ. ಈ ಕಾರ್ಯಕ್ಕೆ ಮಹನೀಯರ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳ ಸಭೆ ಏರ್ಪಡಿಸಿರುವ ದಾಗಿ ತಿಳಿಸಿದರು. ಸಲಹೆ-ಸಹಕಾರ ಬಯಸಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ ಅಭಿಪ್ರಾಯಗಳು ಭಿನ್ನವಾಗಿದ್ದರೂ ಅಂತಿಮ ಸ್ವರೂಪ ಒಂದೇ ಇರಬೇಕು. ಒಕ್ಕೂಟಕ್ಕೆ ಮುಂದಿನ ಯುವ ಪೀಳಿಗೆಯವರು ಬರುವಂತಾಗಬೇಕು, ಪ್ರಸ್ತುತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಕಲಾವಿದರಿಗೆ ನೇರವಾಗಿ ಸಂಭಾವನೆ ಸಂದಾಯವಾಗುತ್ತದೆ. ಅಕಾಡೆಮಿಯ ಚೌಕಟ್ಟಿನೊಳಗೆ ಸಾಂಸ್ಕøತಿಕ ಕಾರ್ಯಕ್ರಮ ವಿಚಾರಗೋಷ್ಠಿಗೆ ಸಹಕಾರ ನೀಡಲು ಪ್ರಯತ್ನಿಸುವದಾಗಿ ಹೇಳಿದರು. ಯಾವದೇ ಕಾರಣಕ್ಕೂ ನಮ್ಮ ಭಾಷೆ, ಆಚಾರಗಳನ್ನು ಬಿಟ್ಟುಕೊಡದೆ ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಜವಾಬ್ದಾರಿ ಬಹಳಷ್ಟಿದೆ. ಈ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಳ್ಳುವÀÀಂತೆ ಸಲಹೆ ಮಾಡಿದರು.
ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ ಮಹಿಳೆಯರನ್ನು ಸೇರಿಸುವದು ಕಷ್ಟದ ಕೆಲಸ, ಸಮಯ ಪಾಲನೆಯೊಂದಿಗೆ ನಮ್ಮಲ್ಲಿ ಬದಲಾವಣೆ ತರುವಂತಹ ರೀತಿಯಲ್ಲಿ ಕಾರ್ಯಕ್ರಮ ಆಗಲಿ. ಆಚಾರ-ವಿಚಾರ, ಪದ್ಧತಿಗಳು ಕಡಿಮೆಯಾ ಗುತ್ತಿದ್ದು, ಈ ನಿಟ್ಟಿನಲ್ಲಿ ಕಾಯೋನ್ಮುಖ ವಾಗಬೇಕು. ಉಡುಪುಗಳ ಬಗ್ಗೆ ಗಂಭೀರತೆ ಇರಬೇಕೆಂದು ಸಲಹೆ ಮಾಡಿದರು. ಪುದಿಯನೆರವನ ರೇವತಿ ರಮೇಶ್ ಅವರು ಆಚಾರ-ವಿಚಾರ ಪಾಲನೆ ಯಾಗಬೇಕು. ಜೊತೆಗೆ ಮೂಢನಂಬಿಕೆ ಬಿಡಬೇಕೆಂದು ಹೇಳಿದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಸಮಾವೇಶಕ್ಕೆ ದಿನಾಂಕ ನಿಗದಿ ಪಡಿಸಬೇಕು. ಆಚಾರ-ವಿಚಾರ ಸಂಸ್ಕøತಿ ಬಗ್ಗೆ ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳನ್ನು ಏರ್ಪಡಿಸಿ, ಮಾಹಿತಿ ನೀಡುವಂತಾಗಬೇಕೆಂದರು. ಹೆಚ್ಚಿಗೆ ಜನ ಸೇರುವದರಿಂದ ಸಮ್ಮೇಳನವನ್ನು ಸಮಾಜದಲ್ಲಿ ಮಾಡುವ ಬದಲಿಗೆ ಮೈದಾನದಲ್ಲಿ ಮಾಡುವದೊಳಿತೆಂಬ ಸಲಹೆ ನೀಡಿದರು.
ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಸಮ್ಮೇಳನ ನಡೆಸುವ ಬಗ್ಗೆ ಏನಾದರೂ ಉದ್ದೇಶ ಹೊಂದಿರಬೇಕು, ಮಹನೀಯರನ್ನು ಸೇರಿಸಿಕೊಂಡು ಕಾರ್ಯಕ್ರಮದ ರೂಪುರೇಷೆ ಮಾಡಿಕೊಂಡು ಮುನ್ನಡೆಯಬೇಕು. ಆಗಾಗ್ಗೆ ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ಮಾಡಿದರು. ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಮಾತನಾಡಿ, ಏಪ್ರಿಲ್ ವೇಳೆಗೆ ಸಮಾಜದ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ. ಸಮಾಜ ಬೇಕೆನಿಸಿದರೆ ಮೊದಲ ಕಾರ್ಯಕ್ರಮವಾಗಿ ಸಮ್ಮೇಳನಕ್ಕೆ ಬಿಟ್ಟುಕೊಡುವದಾಗಿ ಹೇಳಿದರಲ್ಲದೆ, ಮಹಿಳೆಯರೊಂದಿಗೆ ನಾವುಗಳು ಸೇರಿಸಿಕೊಂಡು ಸಹಕರಿಸುವದಾಗಿ ನುಡಿದರು. ಕೊಡಗು ಗೌಡ ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಅವರು ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಹಿಂಜರಿಕೆ ಬೇಡ, ಪ್ರತಿ ಸಮಾಜ ಸಂಘಟನೆಗಳನ್ನು ಸಂಪರ್ಕಿಸಿ ಆಯಾ ಊರುಗಳಿಗೆ ತೆರಳಿ ಸಭೆ ನಡೆಸಿ ಸಹಕಾರ ಪಡೆದುಕೊಳ್ಳಬೇಕು. ವಿವಿಧ ಗೋಷ್ಠಿಗಳನ್ನು ಏರ್ಪಡಿಸಿ, ತಜ್ಞರಿಂದ ಮಾಹಿತಿ ನೀಡುವ ಕಾರ್ಯ ವಾಗಬೇಕು. ಕಾರ್ಯಕ್ರಮದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಿ, ಅಗಾಗ್ಗೆ ಅವಲೋಕನ ಮಾಡುತ್ತಿರ ಬೇಕು. ಸ್ಮರಣ ಸಂಚಿಕೆಗೆ ಜಾಹೀರಾತು ಪಡೆದುಕೊಳ್ಳುವ ಮೂಲಕ ಸಂಪನ್ಮೂಲ ಕ್ರೋಢೀಕರಿ ಸಿಕೊಳ್ಳಬಹುದೆಂದು ಸಲಹೆ ಮಾಡಿದರು.
ಸಾಂಸ್ಕøತಿಕ ಮೆರವಣಿಗೆ
ಸಮ್ಮೇಳನಕ್ಕೆ ಮೆರುಗು ತರುವ ನಿಟ್ಟಿನಲ್ಲಿ ಸಾಂಸ್ಕøತಿಕ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸ ಲಾಯಿತು. ಹುತಾತ್ಮ ಸ್ವಾತಂತ್ರ್ಯ ವೀರ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿಯಿಂದ ಮಹಿಳೆಯರೊಂದಿಗೆ ಪುರುಷÀರಾದಿ ಯಾಗಿ ಸಾಂಪ್ರದಾಯಿಕ ಮೆರವಣಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಂಜೆ ವೇಳೆ ಮಹಿಳೆಯರಿಂದಲೇ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಉಪ ಸಮಿತಿಗಳಿಗೆ ಗೌರವ ಸಲಹೆಗಾರರಾಗಿ ಪುರುಷÀರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್, ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಕೋಳುಮುಡಿಯನ ಅನಂತ್ಕುಮಾರ್, ಗೌಡ ವಿದ್ಯಾಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕಾಮಾಕ್ಷಿ ಗೌಡ ಒಕ್ಕೂಟದ ಅಧ್ಯಕ್ಷ ಪೈಕೇರ ನಂದ, ಸುದರ್ಶನ ಒಕ್ಕೂಟದ ಅಧ್ಯಕ್ಷ ಪಾಣತ್ತಲೆ ಬಿದ್ದಪ್ಪ, ಯುವ ವೇದಿಕೆ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷಣ ಸೇರಿದಂತೆ ಇತರರು ಸಲಹೆ, ಸೂಚನೆ ನೀಡಿದರು. ಈ ಸಂದರ್ಭ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ, ಕಾರ್ಯದರ್ಶಿ ಕೊಂಪುಳಿ ಇಂದಿರಾ, ಖಜಾಂಚಿ ಕೋಳಿಬೈಲು ಹರಿಣಿ, ನಿರ್ದೇಶಕರುಗಳಾದ ಕುದುಪಜೆ ರೇಖಾ, ಪೊನ್ನೇಟಿ ಗಂಗಮ್ಮ, ಅಕಾಡೆಮಿ ಸದಸ್ಯೆ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಒಕ್ಕೂಟದ ಸದಸ್ಯರುಗಳು ಪಾಲ್ಗೊಂಡಿದ್ದರು. ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಸ್ವಾಗತಿಸಿದರೆ, ನಿರ್ದೇಶಕಿ ಕುಂಚಡ್ಕ ಕಸ್ತೂರಿ ಪ್ರಾರ್ಥಿಸಿದರು, ನಿರ್ದೇಶಕಿ ಅಮೆ ದಮಯಂತಿ ನಿರೂಪಿಸಿದರು.