ಗೋಣಿಕೊಪ್ಪ ವರದಿ, ಡಿ. 5: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜೈ ಭೀಮ್ ಕಲಾ ತಂಡ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕøತಿಕ ವಿಶೇಷ ಘಟಕ ಯೋಜನೆಯಡಿ ಚೀನಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸಾಂಸ್ಕøತಿಕ ತರಬೇತಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಜಾನಪದ ಗೀತೆ, ನಾಡಗೀತೆ, ಪರಿಸರ ಗೀತೆ, ಗೀಗಿಪದ ತರಬೇತಿ ನೀಡಲಾಯಿತು. ಚುಟುಕು ಕತೆ ಮೂಲಕ ಸಾಂಸ್ಕøತಿಕ ಅರಿವು ಮೂಡಿಸಲಾಯಿತು. ಮುಖ್ಯಶಿಕ್ಷಕಿ ವಾಮನ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಲಾವಿದರಾದ ಎಸ್.ಟಿ. ಗಿರೀಶ್, ಎಸ್.ಜಿ. ಶರತ್‍ಕುಮಾರ್, ಹೆಚ್.ಡಿ. ಅಭಿಷೇಕ್, ಎನ್.ಎಸ್. ಚೇತನ್, ಜಿ. ನಿರ್ಮಲಾ ಅವರುಗಳು ಪಾಲ್ಗೊಂಡಿದ್ದರು.