ಶನಿವಾರಸಂತೆ, ಡಿ. 5: ಪಟ್ಟಣದ ರೋಟರಿ ಸಂಸ್ಥೆ, ಸೋಮವಾರಪೇಟೆಯ ಪಶುಪಾಲನಾ ಇಲಾಖೆ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಉಚಿತ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ನಾಯಿ ಹುಚ್ಚು (ರೇಬೀಸ್) ಲಸಿಕಾ ಶಿಬಿರವನ್ನು ತಾ. 7 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರ ವರೆಗೆ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಸಹಾಯಕ ಗವರ್ನರ್ ಪಿ. ನಾಗೇಶ್ ಶಿಬಿರ ಉದ್ಘಾಟಿಸುವರು. ಸಂಸ್ಥೆ ಅಧ್ಯಕ್ಷ ಎಸ್.ವಿ. ಶಿಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ನಾಗರಾಜ್, ಡಾ. ಎಸ್.ವಿ. ಬಾದಾಮಿ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ಪಾಲ್ಗೊಳ್ಳುವರು. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ. ಶಿವಪ್ರಸಾದ್ ರೇಬೀಸ್ ಬಗ್ಗೆ ತಿಳುವಳಿಕೆ ನೀಡುವರು ಎಂದು ಸಂಸ್ಥೆ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.