ಗೋಣಿಕೊಪ್ಪ ವರದಿ, ಡಿ. 4: ಒಬ್ಬ ವ್ಯಕ್ತಿಗೆ ಒಂದೇ ಕೋವಿ ಪರವಾನಗಿ ಮಾತ್ರ ನೀಡಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವನೆ ವಿರುದ್ಧ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಕೆ. ಸೋಮಣ್ಣ ಒತ್ತಾಯಿಸಿದ್ದಾರೆ.
ಯೋಧರ ನಾಡು ಕೊಡಗು ಜಿಲ್ಲೆಗೆ 3 ಕೋವಿ ಪರವಾನಗಿಯನ್ನು 1 ಕ್ಕೆ ಇಳಿಸುವ ನಿಯಮ ತರುವದರಿಂದ ಹೆಚ್ಚು ಸಮಸ್ಯೆ ಎದುರಾಗಲಿದೆ. ಇದನ್ನು ಮನಗಂಡು ಸಂಸದರು ವಿರೋಧ ವ್ಯಕ್ತಪಡಿಸಿ ಕೊಡಗಿನ ಕೋವಿ ಬಳಕೆ ಮೂಲಕ ಆಗುತ್ತಿರುವ ಸಂಸ್ಕøತಿಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗಿನಲ್ಲಿ ಹುಟ್ಟು-ಸಾವು ಸಂದರ್ಭ ಕೋವಿ ಬಳಕೆ ಸಂಸ್ಕøತಿಯಾಗಿ ಬಳಕೆಯಾಗುತ್ತದೆ. ಕೂರ್ಗ್‍ಬೈರೇಸ್ ಹಕ್ಕಿನಡಿ ಪಡೆಯುವ ಕೋವಿ ಹಕ್ಕಿಗೆ ಇದರಿಂದ ಧಕ್ಕೆಯಾಗಬಾರದು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿ ಸಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪ್ರಮುಖರಾದ ಕೋಣಿಯಂಡ ಮುತ್ತಣ್ಣ, ಸುಬ್ಬಯ್ಯ, ಸೋಮಣ್ಣ ಇದ್ದರು.