ಗೋಣಿಕೊಪ್ಪಲು, ಡಿ. 5: ಸಮುದಾಯ ಬಾಂಧವರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಕುಲ್ಲಡಕೇರಿ ಕೊಡವ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಡ್ಯಮಾಡ ಗಣಪತಿ (ಗಪ್ಪು) ತಿಳಿಸಿದರು.

ಶ್ರೀಮಂಗಲ ಗ್ರಾಮ ಪಂಚಾಯಿತಿಯ ಕುರ್ಚಿ ಗ್ರಾಮದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದು ಸೇರಿದಂತೆ ಸಾಮಾಜಿಕ ಕೆಲಸ ನಿರ್ವಹಿಸುವದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಬಾಚಮಾಡ ಎಸ್. ಪೂವಯ್ಯ, ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಬಾಚಮಾಡ ಭವಿಕುಮಾರ್ ಪ್ರಮುಖರಾದ ಕಾಳಿಮಾಡ ತಮ್ಮು ಮುತ್ತಣ್ಣ, ಕೋಳೇರ ಬಾಬು, ಬಾಚಂಗಡ ನಂಜಪ್ಪ, ಗಣಪತಿ, ಮುದ್ದಪ್ಪ, ಜಪ್ಪು ನಾಚಪ್ಪ, ಪರಶುರಾಮ್, ಕೋಳೇರ ಸುರೇಶ್, ಅಜ್ಜಮಾಡ ಕೆ. ರಂಜಿ ಚಂಗಪ್ಪ, ಬಿದ್ದಪ್ಪ, ನರೇಂದ್ರ ಮೇದಪ್ಪ, ಬೊಳ್ಳು ಗಣಪತಿ, ಬಾಚಮಾಡ ಸಮಿ ಪೂಣಚ್ಚ, ಐಪುಮಾ ಶಂಬು ದೇವಯ್ಯ, ಬಾದುಮಂಡ ಕಾಶಿ ಪೊನ್ನಣ್ಣ, ಕಾಳಿಮಾಡ ಸಜನ್ ಸೇರಿದಂತೆ ಕುಲ್ಲಡಕೇರಿಯ ಮಹಿಳಾ ಅಧ್ಯಕ್ಷೆ ಬಾಚಮಾಡ ನವಿತ ಪೂಣಚ್ಚ, ಉಪಾಧ್ಯಕ್ಷರಾದ ಬಾಚಂಗಡ ಲಿಲು ದೇವಯ್ಯ ಉಪಸ್ಥಿತರಿದ್ದರು. ಕೋಳೇರ ಜಾನ್ಸಿ ಮೊಣ್ಣಯ್ಯ ಪ್ರಾರ್ಥಿಸಿ, ವಂದಿಸಿದರು.