ಚೆಟ್ಟಳ್ಳಿ, ಡಿ. 3: ಮಡಿಕೇರಿ ನಗರದಲ್ಲಿರುವ ಬೀದಿ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಆತ ಓದುತ್ತಿದ್ದ ಸರಕಾರಿ ಪದವಿಪೂರ್ವ ಕಾಲೇಜಿಗೆ ಕರೆದೊಯ್ದು ಮರಳಿ ಕಾಲೇಜಿಗೆ ಸೇರಿಸಲಾಯಿತು.

ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಾಳ್, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶಿರಾಜ್ ಅಹ್ಮದ್ ಮಕ್ಕಳ ಸಹಾಯವಾಣಿ ತಂಡದ ಸದಸ್ಯರು ಇದ್ದರು.